ಪುತ್ತೂರು: ಜಾಗದ ವಿಚಾರದಲ್ಲಿ ವ್ಯಕ್ತಿಯೋರ್ವರಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವ ಆರೋಪದ ಘಟನೆ ನ.11ರಂದು ನೆಟ್ಟಣಿಗೆಮುಡ್ನೂರು ಪೆರ್ನಾಜೆಯಲ್ಲಿ ನಡೆದಿದೆ. ಈ ಕುರಿತು ಪೆರ್ನಾಜೆ ರಾಮಚಂದ್ರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ತಾನು ನ.11ರಂದು ಬೆಳಿಗ್ಗೆ ಅಣ್ಣನ ಪೆರ್ನಾಜೆಯಲ್ಲಿರುವಾಗ ನೆರೆ ಮನೆಯ ಶ್ವೇತ ಕುಮಾರ್, ಉಮೇಶ್, ಕಿರಣ್, ಜಯರಾಮ ಮತ್ತು ಮನೋಜ್‌ರವರು ಸೇರಿಕೊಂಡು ನಮ್ಮ ಗಡಿ ಸ್ಥಳದಲ್ಲಿ ಬೇಲಿ ಹಾಕುತ್ತಿರುವುದನ್ನು ನೋಡಿ ಮಗನಿಗೆ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡು ತಾನು ಮತ್ತು ಮಗ ರವಿರಾಜ್ ಗಡಿ ಸ್ಥಳದ ಹತ್ತಿರವಿರುವ ಕೆಮ್ಮತ್ತಡ್ಕ-ಪೆರ್ನಾಜೆ ರಸ್ತೆಯಲ್ಲಿ ನಿಂತುಕೊಂಡು, ಬೇಲಿ ಹಾಕುತ್ತಿರುವವರನ್ನು ಕರೆದು ‘ನಮ್ಮ ಸ್ಥಳಕ್ಕೆ ಯಾಕೆ ಬೇಲಿ ಹಾಕುತ್ತಿದ್ದೀರ?’ ಎಂದು ಕೇಳಿದಾಗ ಅವರೆಲ್ಲರೂ ರಸ್ತೆಗೆ ಬಂದು, ಅವರ ಪೈಕಿ ಶ್ವೇತಕುಮಾರ್, ಉಮೇಶ, ಜಯರಾಮ, ಕಿರಣ್ ನನ್ನನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿದಲ್ಲದೇ ಜಾಗದ ವಿಚಾರವಾಗಿ ಕೇಳಲು ಹೋದಾಗ ಕಿರಣ್ ತಡೆದು ನಿಲ್ಲಿಸಿ ಹಲ್ಲೆ ನಡೆಸಿ, ಇನ್ನು ಮುಂದಕ್ಕೆ ಜಾಗದ ವಿಚಾರದಲ್ಲಿ ಬಂದರೆ ಜೀವಸಹಿತ ಬಿಡುವುದಿಲ್ಲ ಎಂಬುದಾಗಿ ಕಿರಣ್ ಮತ್ತು ಜಯರಾಮ ಜೀವ ಬೆದರಿಕೆಯನ್ನು ಹಾಕಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.ರಾಮಚಂದ್ರ ಅವರ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಕಲಂ 352, 126(2), 115(2), 351(3) ಜೊತೆಗೆ 3(5) ಬಿಎನ್‌ಎಸ್‌ನಂತೆ ಪ್ರಕರಣ(ಅ.ಕ್ರ : 130/2024) ದಾಖಲಿಸಿಕೊಂಡಿದ್ದಾರೆ.