ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ನವೆಂಬರ್ 13 ರಂದು ಆಚರಿಸಲಾಯಿತು. ಜವಾಹರ್ ಲಾಲ್ ನೆಹರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಸಮಾರಂಭಕ್ಕೆ ಸಾಂಕೇತಿಕ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಮಾಯಿದೆ ದೇವುಸ್ ಚರ್ಚಿನ ಸಹಾಯಕ ಧರ್ಮಗುರು ಲೋಹಿತ್ ಮಸ್ಕರೇನ್ಹಸ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ವಿವೇಕ್ ಆಳ್ವ, ಸಹಕಾರ್ಯದರ್ಶಿ ಸರಿತ ಪ್ರಮೋದ್, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಭಗಿನಿ ಲೋರಾ ಪಾಯಸ್ ಹಾಗೂ ಶಾಲಾ ನಾಯಕ ಹಾರುಷ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಛದ್ಮವೇಷ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಬಳಿಕ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ವಿವೇಕ್ ಆಳ್ವಾರವರು ಮಕ್ಕಳಿಗೆ ನೀತಿ ಕಥೆಯ ಮೂಲಕ ಪರಿಶ್ರಮಕ್ಕೆ ತಕ್ಕ ಫಲವಿದೆ ಎಂಬ ನೀತಿ ಸಾರಿದರು. ಧರ್ಮಗುರು ಲೋಹಿತ್ ಮಸ್ಕರೇನ್ಹಸ್ ರವರು ಮಾತನಾಡಿ ಮಕ್ಕಳಿಗೆ ಉತ್ತಮ ಗುಣಗಳನ್ನು ಬೆಳೆಸಲು ಒತ್ತು ನೀಡಿದರು. ಶಾಲಾ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಸಮಾರಂಭದಲ್ಲಿ ಶಾಲಾ ಅಧ್ಯಾಪಕ ಹಾಗು ವಿದ್ಯಾರ್ಥಿ ವೃಂದದವರು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರಾದ ಸೋನಲ್ ಪಾಯಸ್ ಮತ್ತು ಲಿನ್ ಲೋಬೊರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಅಧ್ಯಾಪಕಿ ಡಯಾನ ನೊರೊನ್ಹಾ ಸ್ವಾಗತಿಸಿ, ಪ್ರಿಯಕುಮಾರಿ ವಂದಿಸಿದರು.