115 ವರ್ಷದ ಬ್ಯಾಂಕ್ 115 ದಿವಸಕ್ಕೊಂದು ಶಾಖೆ ತೆರಯುವಂತಾಗಲಿ – ಕ್ಯಾ| ಬ್ರಿಜೇಶ್ ಚೌಟ
ಪುತ್ತೂರು: ನ.14 ರಂದು ವಿಟ್ಲದಲ್ಲಿ ಉದ್ಘಾಟನೆಗೊಂಡ ಪುತ್ತೂರಿನ ಪ್ರತಿಷ್ಠಿತ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ನ ನೂತನ ಶಾಖೆಗೆ ನ.15 ರಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಭೇಟಿ ನೀಡಿದರು.
ಈ ಸಂದರ್ಭ ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯ, ಉಪಾಧ್ಯಕ್ಷ ವಿಶ್ವಾಸ್ ಶೆಣೈ, ನಿರ್ದೇಶಕರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ಹೇಮಾವತಿ, ಚಂದ್ರಶೇಖರ್ ಗೌಡ ಕೆ, ಕಿರಣ್ ರೈ ಬಲ್ನಾಡು, ಬ್ಯಾಂಕ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ ಶೇಖರ್ ಶೆಟ್ಟಿ, ವಿಟ್ಲ ಶಾಖೆಯ ಸಹಾಯ ಪ್ರಬಂಧಕ ಚೇತನ್, ಸಿಬ್ಬಂದಿಗಳಾದ ಪವನ್ ನಾಯಕ್, ಉದಯ್ ಸಂಸದರನ್ನು ಸ್ವಾಗತಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ಗ್ರಾ.ಪಂ ಉಪಾಧ್ತಕ್ಷೆ ಸಂಗೀತ, ಕಟ್ಟಡದ ಮಾಲಕ ವಿಕ್ಟರ್ ಪ್ರಾನ್ಸಿಸ್ ಲಸ್ರಾದೋ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.