ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು ಪದವಿ ಪೂರ್ವ(ಪಿಯು) ಕಾಲೇಜುಗಳ ಫೆಸ್ಟ್-ಅಟೆರ್ನಸ್ 2024 ಅಕ್ಷಯ ಕಾಲೇಜಿನಲ್ಲಿ ನ.16 ರಂದು ಜರಗಲಿದೆ.
ಕಾರ್ಯಕ್ರಮವನ್ನು ಅಕ್ಷಯ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಕಾಲೇಜಿನ ಚೇರ್ಮನ್ ಜಯಂತ್ ನಡುಬೈಲುರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ರೋಟರಿ 3181 ಜಿಲ್ಲಾ ಗವರ್ನರ್ ವಿಕ್ರಂ ದತ್ತ, ಪುತ್ತೂರು ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿರವರು ಭಾಗವಹಿಸಲಿದ್ದಾರೆ.
15 ಸ್ಪರ್ಧೆಗಳು:
ಗ್ರೂಪ್ ಸಿಂಗಿಂಗ್, ಸೋಲೊ ಸಿಂಗಿಂಗ್, ಸೋಲೊ ಡ್ಯಾನ್ಸ್, ಗ್ರೂಪ್ ಡ್ಯಾನ್ಸ್, ಮೊಡೆಲ್ ಪ್ರೆಸೆಂಟೇಶನ್, ಜಾಹಿರಾತು, ಪಾಟ್ ಡೆಕೋರೇಶನ್, ಬೆಂಕಿಯಿಲ್ಲದ ಅಡುಗೆ, ಕ್ವಿಜ್, ವೆಲ್ತ್ ಔಟ್ ಆಫ್ ವೇಸ್ಟ್, ಪೆನ್ಸಿಲ್ ಸ್ಕೆಚ್, ಫಿಚ್ಚರ್ ಸ್ಟೋರಿ ರೈಟಿಂಗ್-ಕನ್ನಡ, ಫಿಚ್ಚರ್ ಕವನ ರೈಟಿಂಗ್-ಇಂಗ್ಲೀಷ್, ಮಿ. ಆಂಡ್ ಮಿಸೆಸ್ ಅಟೆರ್ನಸ್, ಫೇಸ್ ಆಫ್ ಅಟೆರ್ನಸ್ ಸ್ಪರ್ಧೆಗಳು ಏರ್ಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಯೋಜಕ ರಾಕೇಶ್ ಕೆ(7760761409), ಸಹ ಸಂಯೋಜಕರಾದ ರಶ್ಮಿ ಕೆ(8970246590), ಅಶೋಕ್ ರೈ ಎಂ(8848712066) ನಂಬರಿಗಾಗಿ ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.