ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಕೆಪಿಎಸ್ ಕುಂಬ್ರ ಇದರೊಂದಿಗೆ ಜಂಟಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳಿಗೆ ಚದ್ಮವೇಷ ಸ್ಪರ್ಧೆಯಲ್ಲಿ ಪುಟಾಣಿ ಹಂಸಿಕಾ ರೈ ಪ್ರಥಮ ಸ್ಥಾನವನ್ನು, ಯಶ್ವಿಕ ದ್ವಿತೀಯ ಸ್ಥಾನವನ್ನು ಪಡೆದು, ಹುಡುಗರ ವಿಭಾಗದಲ್ಲಿ ವಿಖ್ಯಾತ್ ಪ್ರಥಮ ಸ್ಥಾನವನ್ನು ಮಹಮ್ಮದ್ ಸಹದ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಈ ಸ್ಪರ್ಧೆಯ ತೀರ್ಪುಗಾರರಾಗಿ ಪತ್ರಕರ್ತ ಸಿ ಶೇ ಕಜೆಮಾರ್ ಹಾಗೂ ಕೆಪಿಎಸ್ ಹಿಂದಿ ವಿಭಾಗದ ಮುಖ್ಯಸ್ಥೆ ಸಂದ್ಯಾ ಸಹಕರಿಸಿದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿಗೆಳಿಗೆ ಬಹುಮಾನಗಳನ್ನು ನೀಡಲಾಯಿತು,ಬಹುಮಾನಗಳ ಪ್ರಾಯೋಜಕತ್ವವನ್ನು ವಿಜಯಲಕ್ಷ್ಮಿ ನಾರಾಯಣ ರೈಯವರು ನೀಡಿ ಸಹಕರಿಸಿದರು.
ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುಜಾತ ಸಂತೋಷ ರೈ ಕೊಡೆಂಚಾರು ರವರು ಮಕ್ಕಳಿಗೆ ಸಿಹಿ ತಿಂಡಿ ನೀಡಿ ಸಹಕರಿಸಿದರು. ಛದ್ಮ ವೇಷ ಸ್ಪರ್ಧೆಯ ಬಹುಮಾನ ಹಾಗೂ ಸಿಹಿತಿಂಡಿಯನ್ನು ಕೆಪಿಎಸ್ ಕುಂಬ್ರ ಶಾಲಾ ವತಿಯಿಂದ ನೀಡಿ ಸಹಕರಿಸಿದರು. ಬಾಲವಿಕಾಸ ಸಮಿತಿ ಸದಸ್ಯರು ಹಾಗೂ ಪಂಚಾಯತ್ ಸದಸ್ಯ ವಿನೋದ್ ಶೆಟ್ಟಿ ಮುಡಾಲ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈ ವಂದಿಸಿದರು. ಅಂಗನವಾಡಿ ಸಹಾಯಕಿ ರಾಜೀವಿ ಸಹಕರಿಸಿದರು.