puttur: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಫ್ರಾನ್ಸ್ ದೇಶದ ಮಿಸ್ ಮೇರಿಯವರು ದೀಪೋಜ್ವಲನವನ್ನು ಮಾಡಿ, ಚಾಚಾ ನೆಹರು ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಶೋಭಾನಾಗರಾಜ್ ಅವರು ” ಮಕ್ಕಳು ಹೊಣೆಯರಿತು ನಡೆದುಕೊಂಡಾಗ ಅವರ ಜೀವನವು ಸುಂದರವಾಗುವುದರ ಜೊತೆಗೆ ಭಾರತವೂ ಪ್ರಗತಿಯನ್ನು ಹೊಂದುತ್ತದೆ” ಎಂದು ನುಡಿದರು.
ವಿದ್ಯಾರ್ಥಿನಿ ಅನಘ ದಿನದ ಮಹತ್ವವನ್ನು ವಿವರಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನವು ನಡೆಯಿತು. ವಿದ್ಯಾರ್ಥಿಗಳಿಗಾಗಿ ಹಲವು ಆಟೋಟಗಳನ್ನೂ ಆಯೋಜಿಸಲಾಗಿತ್ತು. ಬಣ್ಣದ ಉಡುಪನ್ನು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸಿಹಿತಿಂಡಿ ತಿಂದು ಸಂಭ್ರಮಿಸಿದರು. ವಿದ್ಯಾರ್ಥಿನಿ ಪೂಜಾ ಧನ್ಯವಾದವನ್ನು ಅರ್ಪಿಸಿ, ಈಶಾನ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.