ಪುತ್ತೂರು: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ವಿಟ್ಲ ಎಂಪೈರ್ ಮಾಲ್ನಲ್ಲಿರುವ ಶಾಖೆಗೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ನ.15ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವಿಟ್ಲ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಸದಾನಂದ ಗೌಡ ಸೇರಾಜೆ, ಪುನಿತ್ ಮಾಡತ್ತಾರು, ಸಿಬ್ಬಂದಿಗಳಾದ ದಿನೇಶ್ ಪೆಲತ್ತಿಂಜ, ಹರಿಣಾಕ್ಷಿ ಪಿ, ಪ್ರಕಾಶ್ ಬಿ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ಗೌಡ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ವಿಟ್ಲ ಪಟ್ಟಣ ಪಂಚಾಯತ್ನ ಉಪಾಧ್ಯಕ್ಷೆ ಸಂಗೀತ ಪಾಣೆಮಜಲು, ಶ್ರೀಕೃಷ್ಣ, ನ್ಯಾಯವಾದಿ ಗೋವಿಂದ ಭಟ್, ಶರತ್ ಎನ್.ಎಸ್, ಉದಯ ಕುಮಾರ್ ಆಲಂಗಾರು, ಹರೀಶ್ ಪೂಜಾರಿ, ನಿತಿನ್ ಬುಡ್ಡೋನಿ, ರಾಧಾಕೃಷ್ಣ ಶೆಟ್ಟಿ ಚೆಲ್ಯಡ್ಕ ಉಪಸ್ಥಿತರಿದ್ದರು.