ಪುತ್ತೂರು: ಕಳೆದ 7 ತಿಂಗಳ ಹಿಂದೆ ನಾಪತ್ತೆಯಾದ ಕೆದಂಬಾಡಿ ಗ್ರಾಮದ ಬಾರಿಕೆ ನಿವಾಸಿ ಸಂಕಪ್ಪ ಪೂಜಾರಿ ಎಂಬವರ ಪುತ್ರ ದಿವಾಕರ (37ವ) ರವರು ಇನ್ನೂ ಪತ್ತೆಯಾಗಿಲ್ಲ. ಇದೀಗ ಪೊಲೀಸರು ಸಾರ್ವಜನಿಕರ ಮೊರೆ ಹೋಗಿದ್ದಾರೆ. ಪತ್ತೆಯಾದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಅವಿವಾಹಿತರಾಗಿರುವ ದಿವಾಕರ ಅವರು ಕೂಲಿ ಕಾರ್ಮಿಕರಾಗಿದ್ದು ಎ.27ರಂದು ಬೆಳಿಗ್ಗೆ ಗಂಟೆ 6ಕ್ಕೆ ಮನೆಯಿಂದ ಹೊರಟು ಹೋದವರು ಈ ತನಕ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಅವರು ಆರಂಭದಲ್ಲಿ ಕರೆ ಮಾಡಿ ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು. ಈ ನಡುವೆ ಸಂಪ್ಯ ಪೊಲೀಸರು ಸುಮಾರು 15 ಮಂದಿಯ ತಂಡ ಕಾಡಿನಲ್ಲಿ ಹುಡುಕಾಟವನ್ನೂ ನಡೆಸಿದ್ದರು. ಆದರೂ ದಿವಾಕರ ಅವರು ಪತ್ತೆಯಾಗಿಲ್ಲ. ಇದೀಗ ಎಲ್ಲಿಯಾದರೂ ಪತ್ತೆಯಾದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕರು 9480805363, ಪೊಲೀಸ್ ಉಪನಿರೀಕ್ಷಕ 8904216069, ಪೊಲೀಸ್ ನಿರೀಕ್ಷಕ 9480805301 ಮತ್ತು ಜಿಲ್ಲಾ ಕಂಟ್ರೋಲ್ ರೂಮ್ 9480805300 ಅನ್ನು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.