ಪುತ್ತೂರು: ಕೆಐಸಿ ಕುಂಬ್ರ ಇದರ ನೂತನ ಜಿದ್ದಾ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಜಾವೇದ್ ಕಲ್ಲಡ್ಕ, ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಕಕ್ಕಿಂಜೆ, ಪ್ರ.ಕಾರ್ಯದರ್ಶಿಯಾಗಿ ಇಮ್ರಾನ್ ಅಡ್ಡೂರ್, ಕೋಶಾಧಿಕಾರಿಯಾಗಿ ನಿಝಾರ್ ಚಿಕ್ಕಪುತ್ತೂರು, ಸಂಘಟನಾ ಕಾರ್ಯದರ್ಶಿಯಾಗಿ ಉರೈಸ್ ಬಪ್ಪಳಿಗೆ, ಉಪಾಧ್ಯಕ್ಷರುಗಳಾಗಿ ರಿಯಾಝ್ ದಾರಿಮಿ, ಇಮ್ರಾನ್ ಚೊಕ್ಕಬೆಟ್ಟು, ಇಸ್ಮಾಯಿಲ್ ಬಪ್ಪಳಿಗೆ, ಜೊತೆ ಕಾರ್ಯದರ್ಶಿಗಳಾಗಿ ಇಕ್ಬಾಲ್ ಕಬಕ, ಆರಿಫ್ ಕಕ್ಕಿಂಜೆ, ರಾಫಿಹ್ ಬೆಳ್ಳಾರೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಲೀಂ ನಂದಾವರ, ಹುಸೈನ್ ನಂದಾವರ, ಝುಬೈರ್ ಕಕ್ಕಿಂಜೆ,ನಿಝಾಂ ಸಾಲ್ಮರ, ಹುಸೈನ್ ರವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ಕೆಐಸಿ ಸಂಘಟನಾ ಕಾರ್ಯದರ್ಶಿ ಅನೀಸ್ ಕೌಸರಿ ಹಾಗೂ ಜಿ.ಸಿ.ಸಿ ಕೋಡಿನೇಟರ್ ನೂರ್ ಮುಹಮ್ಮದ್ ನೀರ್ಕಜೆ ಉಪಸ್ಥಿತರಿದ್ದರು.