ಕೋಡಿಂಬಾಡಿ: ಮಹಿಳಾ ಗ್ರಾಮ ಸಭೆ

0

ಉಪ್ಪಿನಂಗಡಿ: ಮಹಿಳೆಯೆನ್ನುವುದು ಅಬಲೆಯಲ್ಲ. ಆಕೆ ಸಬಲೆ. ಗಂಡು ಮತ್ತು ಹೆಣ್ಣು ಎಂಬುದು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪುರುಷರಷ್ಟೇ ಆಕೆಯೂ ಸರಿಸಮಾನಳಾಗಿದ್ದಾಳೆ. ಇದನ್ನು ಮಹಿಳೆಯರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದ್ದು, ಅವಕಾಶ ವಂಚಿತರಾಗದೇ ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುಮಂಗಳ ಶೆಣೈ ಹೇಳಿದರು.


ಇಲ್ಲಿನ ಕೋಡಿಂಬಾಡಿ ಗ್ರಾ.ಪಂ.ನಲ್ಲಿ ನ.15ರಂದು ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಗಂಡು- ಹೆಣ್ಣಿನ ನಡುವೆ ತಾರತಮ್ಯ ಮಾಡಬಾರದು. ಮಹಿಳೆಯರು ಮನೆಗಷ್ಟೇ ಸೀಮಿತರಾಗದೇ ಸಮಾಜದ ಮುಖ್ಯವಾಹಿನಿಗೆ ಬಂದು ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ಹಾಗೂ ರಾಜಕೀಯವಾಗಿ ಸಬಲೀಕರಣಗೊಳ್ಳಬೇಕಿದೆ. ಸಂಘ- ಸಂಸ್ಥೆಗಳಲ್ಲಿ ಗುರುತಿಸಿಕೊಳ್ಳಬೇಕಿದೆ. ಪುರುಷರನ್ನು ವಿರೋಧಿಸದೇ, ಪುರುಷ ಪ್ರಧಾನ ವ್ಯವಸ್ಥೆಯನ್ನು ವಿರೋಧಿಸಬೇಕಿದೆ ಎಂದರಲ್ಲದೆ, ಹೆಣ್ಣಿಗೆ ಗೌರವ ಕೊಟ್ಟು ಮಹಿಳಾ ದಿನವನ್ನು ಆಚರಿಸಿದಾಗ ಮಾತ್ರ ಅದಕ್ಕೊಂದು ಅರ್ಥ ಬರಲು ಸಾಧ್ಯ. ಮಹಿಳೆಯರು ತಮಗಾಗಿರುವ ಅನ್ಯಾಯ, ಸಮಸ್ಯೆಯನ್ನು ಗ್ರಾ.ಪಂ.ಗೆ ತಿಳಿಸಿದಾಗ ಅದಕ್ಕೆ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದರು.


ಅಧ್ಯಕ್ಷತೆ ವಹಿಸಿದ್ದ ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಮಾತನಾಡಿ, ಮಹಿಳೆಯರಿಗೆ ಇಂದು ಎಲ್ಲಾ ಕಡೆ ಅವಕಾಶಗಳಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ಕೆಲಸಗಳ ಮೂಲಕ ಸಮಾಜ ನಮ್ಮನ್ನು ಗುರುತಿಸಿ, ಗೌರವಿಸುವಂತಾಗಬೇಕು ಎಂದರು.


ಕೋಡಿಂಬಾಡಿ ಗ್ರಾ.ಪಂ.ನ ಪ್ರಭಾರ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ಗ್ರಾಮ ಸಭೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.


ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸದಸ್ಯರಾದ ರಾಮಣ್ಣ ಗೌಡ, ಜಗನ್ನಾಥ ಶೆಟ್ಟಿ, ಮೋಹಿನಿ, ಗೀತಾ, ಉಷಾ, ಪೂರ್ಣಿಮಾ, ಪುತ್ತೂರು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಹರಿಣಾಕ್ಷಿ ಬಿ., ಎನ್‌ಆರ್‌ಎಲ್‌ಎಂನ ಒಕ್ಕೂಟ ಅಧ್ಯಕ್ಷೆ ಚಿತ್ರಾ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮೀನಾಕ್ಷಿ, ವೀಣಾ, ಗೌರಿ, ಜಯಂತಿ, ಪಿಎಚ್‌ಸಿಒನ ಸಿ.ಎಂ. ಶೀಲಾ, ಆಶಾ ಕಾರ್ಯಕರ್ತೆಯರಾದ ಪವಿತ್ರ ಎಂ., ಸುವ್ರಿತ, ಗ್ರಾಮಸ್ಥರಾದ ಕುಸುಮ, ಪದ್ಮಲತಾ ಶೆಟ್ಟಿ, ಸಂಧ್ಯಾ ಕೆ., ಕವಿತಾ ಬಿ., ಸ್ಫೂರ್ತಿ ಆರ್. ರೈ, ವೀಣಾ ಬಿ., ತುಳಸಿ ಕೆ., ಶಾರದಾ, ಅನಿತಾ, ಶಶಿಕಲಾ, ಉಷಾ ಕುಮಾರಿ, ಸುಂದರಿ ಪಿ., ಭವ್ಯ ವಿ. ಶೆಟ್ಟಿ, ವೀಣಾ ಎಂ., ಪ್ರಿಯಾ ರಮೇಶ್, ಪ್ರಸನ್ನ ಕುಮಾರಿ ಕೆ ಮತ್ತಿತರರು ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here