ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ “ನಟರಾಜ ವೇದಿಕೆಯಲ್ಲಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಪುತ್ತೂರು ಘಟಕದ 17ನೇ ವಾರ್ಷಿಕೋತ್ಸವ ಮತ್ತು ಶ್ರೀ ರಾಮನಾಮ ತಾರಕ ಹವನಪೂರ್ವಕ ಹನುಮ ಯಾಗದ ಕಾರ್ಯಕ್ರಮದಲ್ಲಿ ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ”ವೀರಮಣಿ ಕಾಳಗ” ಎಂಬ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರಂಕಿ ,ಆನಂದ ಸವಣೂರು ಹಾಗೂ ಚೆಂಡೆ, ಮದ್ದಲೆಗಳಲ್ಲಿಪಿ.ಟಿ. ಜಯರಾಮ್ ಭಟ್ ಮಾ. ಅಮೋಘ ಶಂಕರ ಸಹಕರಿಸಿದರು. ಮುಮ್ಮೇಳದಲ್ಲಿ, ಶುಭಾ ಅಡಿಗ(ಹನೂಮ), ಶುಭಾ ಗಣೇಶ್ (ಶತ್ರುಘ್ನ), ಕಿಶೋರಿ ದುರ್ಗಪ್ಪ ನಡುಗಲ್ಲು (ಈಶ್ವರ), ಹರಿಣಾಕ್ಷಿ ಜೆ .ಶೆಟ್ಟಿ (ವೀರಮಣಿ) ಭಾರತಿ ರೈ (ಶ್ರೀರಾಮ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಹರಿಣಾಕ್ಷಿ ಜೆ ಶೆಟ್ಟಿ ಪ್ರಾಯೋಜಿಸಿದ್ದರು. ಶ್ರೀ ಗುರುದೇವಾನಂದ ಸ್ವಾಮೀಜಿಗಳು ಕಲಾವಿದರಿಗೆ ಶ್ರೀದೇವರ ಪ್ರಸಾದ ಹಾಗೂ ಮಂತ್ರಾಕ್ಷತೆಯನ್ನಿತ್ತು ಹರಸಿದರು.