ಪುತ್ತೂರು: SKSSF ಕುಂಬ್ರ ವಲಯ ಮಟ್ಟದ ಕಲೋತ್ಸವ ಕಾರ್ಯಕ್ರಮ ಮಾಡಾವು ಬದ್ರಿಯಾ ಮಸೀದಿ ಸಭಾಂಗಣದಲ್ಲಿ ನಡೆಯಿತು. ಮಾಡಾವು ಬದ್ರಿಯಾ ಜುಮಾ ಮಸೀದಿ ಗೌರವಾದ್ಯಕ್ಷರಾದ ಇಬ್ರಾಹಿಂ ಹಾಜಿ ಮಾಡಾವು ಧ್ವಜಾರೋಹಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪುತ್ತೂರು ಸಮಸ್ತ ಜಂ-ಇಯ್ಯತುಲ್ ಉಲಮಾ ಕೋಶಾಧಿಕಾರಿ ನಂಜೆ ಉಮರ್ ಮುಸ್ಲಿಯಾರ್ ಪ್ರಾರ್ಥನೆಗೆ ನೇತೃತ್ವ ನೀಡಿದರು.
ವಲಯಾದ್ಯಕ್ಷರಾದ ಮನ್ಸೂರ್ ಅಸ್ಲಮಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬರಾದ ನೌಫಲ್ ರಹ್ಮಾನಿ ಉದ್ಘಾಟನೆ ಮಾಡಿದರು. ವಲಯ SKSSF ದ.ಕ.ಈಸ್ಟ್ ಜಿಲ್ಲಾ ಕಾರ್ಯದರ್ಶಿ ಹಾರಿಸ್ ಕೌಸರಿ ಶುಭಹಾರೈಸಿ ಮಾತನಾಡಿದರು. ವೇದಿಕೆ ವಲಯ ಉಸ್ತುವಾರಿ ಯಾಸಿರ್ ಚಿಬಿದ್ರೆ , ಜಿಲ್ಲಾ ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ , ರಾಜ್ಯ ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ರಹ್ಮಾನಿ, ವಲಯ ಕೋಶಾಧಿಕಾರಿ ಮಹಮ್ಮದ್ ಕೆ. ಎಚ್, ವಲಯ ಉಪಾದ್ಯಕ್ಷರಾದ ಝೈನುದ್ದೀನ್ ಹಾಜಿ, ರೆಂಜಲಾಡಿ ಖತೀಬರಾದ ನಾಸಿರ್ ಫೈಝಿ, ಉದ್ಯಮಿ ಸಲಾವುದ್ದೀನ್ ಪದಡ್ಕ, ಬಶೀರ್ ಕೌಡಿಚ್ಚಾರು, ಕೂಡುರಸ್ತೆ ಖತೀಬರಾದ ಬದ್ರುದ್ದೀನ್ ರಹ್ಮಾನಿ, ರೆಂಜಲಾಡಿ ಕ್ಲಸ್ಟರ್ ಅಧ್ಯಕ್ಷರಾದ ಮಹಮ್ಮದ್ ಅಝರುದ್ದೀನ್, ರಾಜ್ಯ ಸರ್ಗಲಯ ಚೇರ್ಮೆನ್ ಉಮರ್ ದಾರಿಮಿ, ಮಾಡಾವು ಸಹ ಅದ್ಯಾಪಕರಾದ ಇಕ್ಬಾಲ್ ಮುಸ್ಲಿಯಾರ್, ಇಸ್ಮಾಯಿಲ್ ಅರ್ಷದಿ ಉಪಸ್ಥಿತರಿದ್ದರು. ಕುಂಬ್ರ ವಲಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿದರು.
4 ವೇದಿಕೆಗಳಲ್ಲಿ 22 ಯುನಿಟ್ ವ್ಯಾಪ್ತಿಯ 30 ಮದ್ರಸಗಳ 300 ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.
ತಿಂಗಳಾಡಿ ಕ್ಲಸ್ಟರ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಈಶ್ವರಮಂಗಳ ಕ್ಲಸ್ಟರ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ತ್ವಲಬಾ ಚಾಂಪಿಯನ್ ಆಗಿ ನೂರುಲ್ ವಿದ್ಯಾ ಸಂಸ್ಥೆ ಹೊರಹೊಮ್ಮಿದರೆ, ಕುಂಬ್ರ ಕೆ. ಐ. ಸಿ. ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಡಾವು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹುಸೈನಾರ್ ಸಂತೋಷ್ ವಹಿಸಿದ್ದರು. ಜಿಲ್ಲಾಧ್ಯಕ್ಷ ಮಹಮ್ಮದ್ ನವವಿ ಮುಂಡೋಲೆ ಸಭೆಯನ್ನು ಉದ್ಘಾಟಿಸಿದರು. ವಲಯಾಧ್ಯಕ್ಷ ಮನ್ಸೂರ್ ಅಸ್ಲಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಲಯ ಕೋಶಾಧಿಕಾರಿ ಮಹಮ್ಮದ್ ಕೆ. ಎಚ್, ವಲಯ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ, ರಾಜ್ಯ ಸರ್ಗಲಯ ಚೆಯರ್ಮೇನ್ ಉಮರ್ ದಾರಿಮಿ ಶುಭಹಾರೈಸಿ ಮಾತನಾಡಿದರು. ಮಾಡಾವು ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಫ್ಯಾಮಿಲಿ, ಮಾಡಾವು ಗೌಸಿಯಾ ಯಂಗ್ ಮೆನ್ಸ್ ಅಧ್ಯಕ್ಷ ಹಾರಿಸ್ ಪಾತುಂಜ, ಕಾರ್ಯದರ್ಶಿ ಅಝೀಝ್ ಕ್ಯಾಂಪ್ಕೋ, ಮಾಡಾವು ಯುನಿಟ್ ಅಧ್ಯಕ್ಷ ನಿಝಾಂ ಹೋನೆಸ್ಟ್ , ಕಾರ್ಯದರ್ಶಿ ಸಿರಾಜ್ ಮಾಡಾವು, ತಿಂಗಳಾಡಿ ಕ್ಲಸ್ಟರ್ ಅಧ್ಯಕ್ಷ ಅಶ್ರಫ್ ಮಾಡಾವು, ಸರ್ಗಲಯ ವಲಯ ಚೆಯರ್ಮೇನ್ ನೌಫಲ್ ಅಜ್ಜಿಕಲ್ಲು , ಜಿಲ್ಲಾ ಸರ್ಗಲಯ ಕನ್ವೀನರ್ ಗಫೂರ್ ಅಶ್ಯಾಫಿ, ಪ್ರೋಗ್ರಾಂ ಚೆಯರ್ಮೇನ್ ಅಬ್ದುಲ್ ಸಲಾಂ ಮೇನಾಲ, ಕನ್ವೀನರ್ ಝಕರಿಯ ಮುಸ್ಲಿಯಾರ್, ಶಂಸುದ್ದೀನ್ ಇಂದುಮೂಲೆ, ಹನೀಫ್ ದಾರಿಮಿ ಇರ್ದೆ, ಶಕೀಲ್ ಅಹ್ಮದ್, ನಾಸಿರ್ ಫೈಝಿ ಪರ್ಪುಂಜ, ಇಬ್ರಾಹಿಂ ಕೌಸರಿ ಮುಂಡೋಲೆ, ಬಶೀರ್ ಗಟ್ಟಮನೆ ಹಾಗೂ ವಲಯ ಸಮಿತಿ ಪದಾಧಿಕಾರಿಗಳು, ಮಾಡಾವು ಜುಮಾ ಮಸೀದಿ ಆಡಳಿತ ಪದಾಧಿಕಾರಿಗಳು, ಗೌಸಿಯಾ ಯಂಗ್ಮೆನ್ಸ್ ಪದಾಧಿಕಾರಿಗಳು, ಮಾಡಾವು ಯುನಿಟ್ ಪದಾಧಿಕಾರಿಗಳು, ಸಂಘಟನಾ ರಾಜ್ಯ, ಜಿಲ್ಲಾ ಮಟ್ಟದ ನಾಯಕರು , ಹಲವಾರು ಮೊಹಲ್ಲಾಗಳ ನಾಯಕರು, ಕ್ಲಸ್ಟರ್ ಮಟ್ಟದ ಪದಾಧಿಕಾರಿಗಳು, ಯುುನಿಟ್ ಮಟ್ಟದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಲಯ ಟ್ರೆಂಡ್ ಚೆಯರ್ಮೇನ್ ಲತೀಫ್ ಕೊರಿಂಗಿಲ ಕಾರ್ಯಕ್ರಮ ನಿರೂಪಿಸಿದರು.