-ನೆಟ್ಲ ಮುಡ್ನೂರು ಗ್ರಾಮ ಒಕ್ಕೂಟದ 2 ಮಾದರಿ ದಂಪತಿಗಳಿಗೆ ಸನ್ಮಾನ
ನೆಟ್ಲಮುಡ್ನೂರು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವ ಸಹಾಯ ಸಂಘಗಳಿರುವ ಎಲ್ಲ ಗ್ರಾಮಗಳಲ್ಲಿ ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನ.18ರಂದು ವಿಟ್ಲ ವಲಯದ ನೆಟ್ಲ ಮುಡ್ನೂರು ಗ್ರಾಮದ ಯುವ ಘಟಕದ ಅಧ್ಯಕ್ಷರಾದ ಧನಂಜಯ ಗೌಡ ಮೀನಾವು ಇವರ ಮನೆಯಲ್ಲಿ 2 ದಂಪತಿಗಳಿಗೆ ಸನ್ಮಾನ ಮಾಡಲಾಯಿತು. ಶ್ರೀಮತಿ ತಿಮ್ಮಕ್ಕ ಮತ್ತು ಶ್ರೀ ಮೋನಪ್ಪ ಗೌಡ ಮೀನಾವು ಶ್ರೀಮತಿ ಲಿಂಗಮ್ಮ ಶ್ರೀ ದೇವಪ್ಪ ಗೌಡ ಮಾಯಿಲಗುಡ್ಡೆ ದಂಪತಿಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷರಾದ ಎ ವಿ ನಾರಾಯಣ ಗೌಡ,ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ,ಒಕ್ಕೂಟ ಅಧ್ಯಕ್ಷರಾದ ಸುಂದರ ಗೌಡ,ಗ್ರಾಮ ಸಮಿತಿಯ ಅಧ್ಯಕ್ಷರಾದ ದೇವಪ್ಪ ಗೌಡ, ನೆಟ್ಲ ಮುಡ್ನೂರು ಗ್ರಾಮದ ಊರ ಗೌಡರಾದ ಓಬಯ್ಯ ಗೌಡ,ಬಂಟ್ವಾಳ ತಾಲೂಕಿನ ಒಕ್ಕಲಿಗ ಗೌಡ ಸಮುದಾಯದ ಉಪಾಧ್ಯಕ್ಷರಾದ ತನಿಯಪ್ಪ ಗೌಡ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಅನಿತಾ,ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಮೇಲ್ವಿಚಾರಕರಾದ ಶ್ರೀಮತಿ ಸುಮಲತಾ, ಪ್ರೇರಕರಾದ ಶ್ರೀಮತಿ ಜಯಶ್ರೀ ಮತ್ತು ಶ್ರೀಮತಿ ಶ್ರುತಿ ಹಾಗು ಊರಿನ ಸಮಾಜ ಬಾಂಧವರು ಮತ್ತು ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ನವ್ಯ ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಮೇಲ್ವಿಚಾರಕಿ ಸುಮಲತಾ ನಿರೂಪಿಸಿದರು.ಎಲ್ಲರನ್ನು ಪ್ರೇರಕಿಯಾದ ಶ್ರುತಿ ಸ್ವಾಗತಿಸಿದರು.ಲಿಂಗಮ್ಮ ಮತ್ತು ದೇವಪ್ಪ ಗೌಡರ ಪರಿಚಯವನ್ನು ಒಕ್ಕೂಟ ಕಾರ್ಯದರ್ಶಿ ನವ್ಯ ವಾಚಿಸಿದರು.ತಿಮ್ಮಕ್ಕ ಮತ್ತು ಮೋನಪ್ಪ ಗೌಡರ ಪರಿಚಯವನ್ನು ಶ್ರೀಮತಿ ಮಮತಾರವರು ವಾಚಿಸಿದರು. ಎಲ್ಲರನ್ನು ತನಿಯಪ್ಪ ಗೌಡ ದಾಸರಕೋಡಿ ವಂದಿಸಿದರು.