ಉಪ್ಪಿನಂಗಡಿ : ವಿದ್ಯಾಭಾರತಿ ವತಿಯಿಂದ ನ.16 ರಿಂದ 19 ರವರೆಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ಯಾಂಪಸ್ನಲ್ಲಿ ವಿದ್ಯಾಭಾರತಿ ಅಖಿಲ ಭಾರತಿ ಶಿಕ್ಷಾ ಸಂಸ್ಥಾನಮ್, ವಿದ್ಯಾಭಾರತಿ ಕರ್ನಾಟಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಆಂಧ್ರ, ತೆಲಂಗಾಣ, ಕರ್ನಾಟಕವನ್ನು ಪ್ರತಿನಿಧಿಸಿದ 19ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 10ನೇ ತರಗತಿಯ ಪ್ರಾಪ್ತಿ ಪಿ ಶೆಟ್ಟಿ, 9ನೇ ತರಗತಿಯ ಅನ್ವಿ ಆರ್ ಆಚಾರ್ಯ ಹಾಗೂ ಸವ್ಯ ಎಂ ಎಸ್.ಜಿ.ಎಫ್.ಐ ಗೆ ಆಯ್ಕೆಯಾಗಿರುತ್ತಾರೆ.
17ರ ವಯೋಮಾನದ ವಿಭಾಗದಲ್ಲಿ ತನ್ವಿ ಕನ್ಯಾನ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. 14ರ ವಯೋಮಾನದ ಬಾಲಕರ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಾದ ಆಯತ್ತುಲ್ಲಾ ಸಲೀಂ, ಮೊಹಮ್ಮದ್ ಸೈಫುಲ್ಲಾ, 6ನೇ ತರಗತಿಯ ವಿದ್ಯಾರ್ಥಿಗಳಾದ ಸಹನ್ ಕೆ.ಎಸ್, ಅನ್ಶುಲ್ ಶೆಟ್ಟಿ, 7ನೇ ತರಗತಿಯ ವಿದ್ಯಾರ್ಥಿಗಳಾದ ಶಿಶಿರ್ ಜೆ ಸಾಲಿಯಾನ್, ಕೆ. ಅತುಲ್ ನಾಯಕ್, ವಚನ್ ಕನ್ಯಾನ, ನಿಶಾದ್ ಸುಲೈಮಾನ್ ಕೆ, ಮೊಹಮ್ಮದ್ ಇರಾಝ್ ಹಾಗೂ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಾದ ಎಂ.ಎಸ್ ಅನುಶ್ರೀ, ಎಂ.ಧನ್ವಿ ಶೆಟ್ಟಿ, ಸ್ತುತಿ ಶೆಟ್ಟಿ, 7ನೇ ತರಗತಿಯ ವಿದ್ಯಾರ್ಥಿಗಳಾದ ತೃಷಾ ಕೆ, ಹಂಸಿನಿ .ಜಿ , ಶ್ರೀಯ ಎಸ್ ಶೆಟ್ಟಿ, ಶ್ರಾವಣ್ಯ ಎಸ್, 6ನೇ ತರಗತಿಯ ವಿದ್ಯಾರ್ಥಿಗಳಾದ ಸಾನ್ವಿ ಸಿ.ಎಚ್, ಅನುಷ್ಕ ಜೆ ವಿದ್ಯಾರ್ಥಿಗಳ ತಂಡವು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾ ಹಾಗೂ ಶ್ರೀರಂಜಿನಿ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.