ಪುತ್ತೂರು: ಅಂಡರ್ ವಾಟರ್ ಸ್ಪೋರ್ಟ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜನೆಯಲ್ಲಿ ನ.14 ರಿಂದ 17ರವರೆಗೆ ನ್ಯೂ ದೆಹಲಿಯ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸ್ವಿಮ್ಮಿಂಗ್ ಫೂಲ್ ಸಂಕಿರ್ಣದಲ್ಲಿ ನಡೆದ ನಾಲ್ಕನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್ ನ ಈಜುಪಟುಗಳು ದಾಖಲೆ ಬರೆದಿದ್ದಾರೆ. ಈ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯ ರನ್ನರ್ ಆಫ್ ಆಗಿದೆ.
ಜ್ಯೂನಿಯರ್ ಬಿ ವಿಭಾಗದಲ್ಲಿ ಸ್ಪರ್ಧಿಸಿದ ಅನ್ವಿತ್ ರೈ ಬಾರಿಕೆ ಮೊನೋ-ಫಿನ್ 50 ಮೀ, 100 ಮೀ ಮತ್ತು 200ಮೀ ವಿಭಾಗದಲ್ಲಿ ಮೂರು ಬಂಗಾರ ಹಾಗೂ 50ಮೀ ಬೈ-ಫಿನ್ ವಿಭಾಗದಲ್ಲಿ ಕಂಚು, 4×100 ಮೀಟರ್ ಮಿಕ್ಸೆಡ್ ರಿಲೇಯಲ್ಲಿ ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿರುತ್ತಾರೆ.
ಜ್ಯೂನಿಯರ್ ಬಿ ವಿಭಾಗದ ದಿಗಂತ್ ವಿ.ಎಸ್ 50ಮೀ ಬೈ-ಪಿನ್ಸ್ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಹೊಸ ಕೂಟ ದಾಖಲೆಯನ್ನು ಮಾಡಿರುತ್ತಾರೆ. ಜೊತೆಗೆ 200ಮೀ ಬೈ-ಫಿನ್ಸ್ ನಲ್ಲಿ ಬೆಳ್ಳಿ ಹಾಗೂ 50ಮೀ ಅಪ್ನಿಯದಲ್ಲಿ ಕಂಚಿನ ಪದಕ ಪಡೆದುಕೊಂಡಿರುತ್ತಾರೆ.
ಜ್ಯೂನಿಯರ್ E ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾನ್ವಿ ಸಿ.ಎಚ್ 50ಮೀ ಸರ್ಫೆಸ್ ನಲ್ಲಿ ಚಿನ್ನ, 4×100 ರಿಲೇ ಚಿನ್ನ, 50ಮೀ ಬೈ-ಫಿನ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಆರ್ ಅಮನ್ ರಾಜ್ ಇವರು 100ಮೀ ಮತ್ತು 200ಮೀ ಬೈ – ಫಿನ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು 50 ಮೀ ಬೈ – ಫಿನ್ ಹಾಗೂ 50 ಮೀ ಅಪ್ನಿಯದಲ್ಲಿ ಬೆಳ್ಳಿ, 4×100 ಮಿಕ್ಸೆಡ್ ರಿಲೇಯಲ್ಲಿ ಚಿನ್ನದ ಪದಕ ಪಡೆದುಕೊಂಡಿರುತ್ತಾರೆ.
ಇಶಾನಿ ಆರ್ ರೈ ಜ್ಯೂನಿಯರ್ F ವಿಭಾಗದಲ್ಲಿ ಸ್ಪರ್ಧಿಸಿದ್ದು, 50 ಮೀ ಬೈ-ಫಿನ್ಸ್ ನಲ್ಲಿ ಬೆಳ್ಳಿ ಪದ ಗೆದ್ದಿದ್ದಾರೆ.
ಈ ಈಜುಪಟುಗಳಿಗೆ ಪರ್ಲಡ್ಕದ ಬಾಲವನದ ಪುತ್ತೂರು ಅಕ್ವೆಟಿಕ್ ಕ್ಲಬ್ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ್ ಜಿ ಆರ್, ದೀಕ್ಷಿತ್ ರಾವ್ ಮತ್ತು ರೋಹಿತ್ ಪ್ರಕಾಶ್ ತರಬೇತಿ ನೀಡಿರುತ್ತಾರೆ. ಬೆಂಗಳೂರಿನ ಲೋಕೇಶ್ ಎಂ.ಜೆ ಹಾಗೂ ಪುತ್ತೂರಿನ ಸ್ವೀಕೃತ್ ಆನಂದ್ ಕರ್ನಾಟಕ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.