





ಪುತ್ತೂರು: ಅಂಡರ್‌ವಾಟರ್ ಸ್ಫೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ಆಯೋಜನೆಯಲ್ಲಿ ನ.14ರಿಂದ 17ರ ತನಕ ನವದೆಹಲಿಯ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಸ್ವಿಮ್ಮಿಂಗ್ ಪೂಲ್ ಸಂಕೀರ್ಣದಲ್ಲಿ ನಡೆದ 4ನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಇಶಾನಿ ಆರ್.ರೈಯವರು 50 ಮೀ.ಬೈ-ಫಿನ್ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.


ಇವರು ಪರ್ಲಡ್ಕ ಬಾಲವನದ ಆಕ್ವೆಟಿಕ್ ಕ್ಲಬ್‌ನ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಫ್ ಜಿ.ಆರ್., ದೀಕ್ಷಿತ್ ರಾವ್, ರೋಹಿತ್ ಪ್ರಕಾಶ್, ತ್ರಿಶೂಲ್, ವಿಕಾಸ್, ಶಿಶಿಲ್‌ರವರಿಂದ ತರಬೇತಿ ಪಡೆದಿದ್ದಾರೆ. ಸಂಪ್ಯಮೂಲೆ ನಿವಾಸಿ ರಾಜೇಶ್ ರೈ ಎಸ್.,ಮತ್ತು ಆಶಾಲತಾ ದಂಪತಿ ಪುತ್ರಿಯಾಗಿರುವ ಈಕೆ ದರ್ಬೆ ಪಾಂಗ್ಳಾಯಿ ಬೆಥನಿ ಹೈಯರ್ ಪ್ರೈಮರಿ ಶಾಲೆಯ ೪ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಶಾಲಾ ಮುಖ್ಯಶಿಕ್ಷಕಿ ಭಗಿನಿ ಸೆಲಿನ ಪೇತ್ರಾ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಹಶಿಕ್ಷಕರು ಅಭಿನಂದಿಸಿದರು.













