ಪುತ್ತೂರು: ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ “INFOTSAV 2K24” ಕಾರ್ಯಕ್ರಮ ನ.21ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈ ವಹಿಸಿ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಗಳಾಗಲು ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಸ್ಪರ್ಧೆ ತರಬೇತಿಗಳು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡುಯ್ಯುತ್ತದೆ ಎಂದರು.
ಮುಖ್ಯ ಅತಿಥಿ ಬೆಳ್ಳಾರೆ ಆರಕ್ಷಕ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಹೀರಯ್ಯ ಡಿ.ಎನ್ ಮಾತನಾಡಿ ಉತ್ತಮರ ಸ್ನೇಹ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರಿ ಅಲ್ಲದೆ ಎಲ್ಲಾ ಸಂದರ್ಭದಲ್ಲಿ ಸೃಜನಶೀಲರಾಗಿ ಇರಿ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸುಳ್ಯ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಇದರ ಅಧ್ಯಕ್ಷ ಪಿ.ಬಿ ಸುಧಾಕರ್ ರೈ ಮಾತನಾಡಿ ಕಲಿಯುವ ಸಂಸ್ಥೆಗೆ ಚಿರಋಣಿಗಳಾಗಬೇಕು. ಅವಕಾಶಗಳನ್ನು ಉಪಯೋಗಿಸಿಕೊಂಡು ತಮ್ಮ ಪ್ರತಿಭೆಗಳನ್ನು ಅಳವಡಿಸಬೇಕೆಂದರು.
ಪ್ರಗತಿ ಸಿ.ಬಿ ಯವರು ಅತಿಥಿಗಳ ಪರಿಚಯವನ್ನು ಮಾಡಿದರು. ಬಿ.ಸಿ.ಎ ವಿಭಾಗದ ಮುಖ್ಯಸ್ಥೆ ಪ್ರತಿಭಾ ಭಟ್ ಕಾರ್ಯಕ್ರಮದ ವಿವರಗಳನ್ನು ನೀಡಿದರು. ವೇದಿಕೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ. , ಉಪಪ್ರಾಂಶುಪಾಲ ಎಂ ಶೇಷಗಿರಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘಟಕ ಅಶ್ಮಿತ್ ಎ.ಕೆ ಸ್ವಾಗತಿಸಿ, ಸೋನಿಕಾ ಎಸ್.ಆರ್ ವಂದಿಸಿ, ಕಾರ್ಯಕ್ರಮವನ್ನು ಪವಿತ್ರಾ ನಿರೂಪಿಸಿದರು.
“INFOTSAV 2K24” ಕಾರ್ಯಕ್ರಮದಲ್ಲಿ ಪ್ರಸನ್ನ ಪದವಿಪೂರ್ವ ಕಾಲೇಜು ಬೆಳ್ತಂಗಡಿ ಪ್ರಥಮ ಸ್ಥಾನವನ್ನು ಪಡೆದು ಚಾಂಪಿಯನ್‌ಶಿಪ್ ನ್ನು ಪಡೆದುಕೊಂಡಿದ್ದಾರೆ ಹಾಗೂ ಕೆ.ಎಸ್ ಗೌಡ ಪದವಿಪೂರ್ವ ಕಾಲೇಜು ನಿಂತಿಕಲ್ಲು ಇವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ ಲಕ್ಕಿ ಕೂಪನ್ ಡ್ರಾ ಮಾಡಲಾಯಿತು. ಪ್ರಥಮ 2561 ಹನೀಫ್ ಕುರ್ತಾಳ, ದ್ವಿತೀಯ 1565 ಸೂರ್ಯ ಹಾಗೂ ತೃತೀಯ 1677 ಕೆ.ಕೆ.ಜನರಲ್ ಸ್ಟೋರ್ ಅಂಕಜಾಲು ಈ ಲಕ್ಕಿ ಕೂಪನ್ ನ ವಿಜೇತರಾದರು.