ನ.27: ಹೆಸರು ನೋಂದಾವಣೆಗೆ ಕೊನೆ ದಿನ
ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಕಾಲೇಜಿನ ಫ್ಯಾಷನ್ ಡಿಸೈನ್ ವಿಭಾಗ ಹಾಗೂ ಸಾಂಸ್ಕೃತಿಕ ಮತ್ತು ಲಲಿತಾ ಕಲಾ ಸಂಘದ ವತಿಯಿಂದ “ಪ್ರಿನ್ಸ್ ಆಂಡ್ ಪ್ರಿನ್ಸೆಸ್ ಪುತ್ತೂರು” ಫ್ಯಾಷನ್ ಶೋ ಆಡಿಷನ್ ಕಾರ್ಯಕ್ರಮ ಡಿ.1 ರಂದು ನಡೆಯಲಿದೆ.
ವಯಸ್ಸು 6 ರಿಂದ 10ರ ವರೆಗೆ, ವಯಸ್ಸು 11 ರಿಂದ 14ರ ವರೆಗೆ, ವಯಸ್ಸು 15ರಿಂದ 18ರ ವರೆಗೆ ಹೀಗೆ ಒಟ್ಟು ಮೂರು ಕೆಟಗರಿಯಲ್ಲಿ ಫ್ಯಾಷನ್ ಶೋ ಆಡಿಷನ್ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಮಕ್ಕಳು ಭಾಗವಹಿಸಬಹುದಾಗಿದ್ದು ಕಾಲೇಜಿನ ಕ್ಯೂ.ಆರ್ ಸ್ಕ್ಯಾನ್ ಮೂಲಕ ಹೆಸರು ನೋಂದಾಯಿಸಬಹುದಾಗಿದೆ. ನವೆಂಬರ್ 27 ಹೆಸರು ನೋಂದಾವಣೆಗೆ ಅಂತಿಮ ದಿನವಾಗಿದ್ದು ಹೆಚ್ಚಿನ ಮಾಹಿತಿಗಾಗಿ 9141160704, 9108009795 ನಂಬರಿಗೆ ಸಂಪರ್ಕಿಸಬಹುದು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.