





ಕಾವು:ದಕ್ಷಿಣ ಕನ್ನಡ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಇದರ ವತಿಯಿಂದ ಪುತ್ತೂರು ನಗರ ಎಪಿಎಂಸಿ ರೈತ ಸಭಾಭವನದಲ್ಲಿ ನ.17ರಂದು ನಡೆದ ರಾಜ್ಯಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಶೋಭಿತ ರೈ ಇವರು ಕಟ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಕರಾಟೆ ಚಾಂಪಿಯನ್ ಪಡೆದುಕೊಂಡಿರುತ್ತಾರೆ. ಇವರಿಗೆ ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ ಮಳಿ ತರಬೇತಿ ನೀಡಿರುತ್ತಾರೆ. ಇವರು ಪುತ್ತೂರು ತಾಲೂಕು, ಮಾಡ್ನೂರು ಗ್ರಾಮದ ದೊಳಂತೋಡಿ ರವಿಪ್ರಸಾದ್ ರೈ ಮತ್ತು ಗೀತಾ ಶೆಟ್ಟಿ ದಂಪತಿಗಳ ಪುತ್ರಿ.












