ಪುತ್ತೂರು: ಪುತ್ತೂರಿನ ಪಾಂಗಳಾಯಿ ರಸ್ತೆಯ ಮುಳಿಯ ಲೇಔಟ್ ನ ಪದ್ಮಾವತಿ ರಾಮಕೃಷ್ಣ ಭಟ್ ಅವರ ಸ್ವಗೃಹ ‘ಗೋಕುಲ’ದಲ್ಲಿ ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮವು ನ.23ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರಿನ ಖ್ಯಾತ ಸಾಹಿತಿಗಳೂ, ಸಂಘದ ಹಿರಿಯ ಸದಸ್ಯರೂ ಆದ ವಿ. ಬಿ. ಅರ್ತಿಕಜೆಯವರು ವಹಿಸಿದರು. ಅವರು, ಅಧ್ಯಕ್ಷ ಎಂಬ ಶಬ್ದದ ಅರ್ಥವನ್ನು ವಿವರಿಸುತ್ತಾ, ನಡೆದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು.
ಸುದಾಮ ಕೆದಿಲಾಯ, ಡಾ. ಎ.ಪಿ ಭಟ್, ಸುಬ್ರಹ್ಮಣ್ಯ ಶರ್ಮ, ಪದ್ಮಾವತಿ ಭಟ್, ದತ್ತಾತ್ರೇಯ ರಾವ್, ಜಯಲಕ್ಷ್ಮಿ ವಿ.ಭಟ್, ಭಾಗ್ಯಲಕ್ಷ್ಮಿ ಅರ್ತಿಕಜೆ, ಉಷಾ ಭಟ್, ಹೈಮಾವತಿ ಭಟ್, ಭಾರತಿ ಎಚ್. ಎನ್ ಭಟ್ ಮುಂತಾದವರು ತಮ್ಮ ವೈವಿಧ್ಯಮಯ ಕಾರ್ಯಕ್ರಮಗಳಿಂದ ಸಭಿಕರನ್ನು ರಂಜಿಸಿದರು.
ಜಯಶ್ರೀ ರಾಜಗೋಪಾಲ ಪ್ರಾರ್ಥಿಸಿದರು. ಮಧುರ ಬೆಟ್ಟ ವರದಿ ವಾಚಿಸಿ ವಂದಿಸಿದರು. ರಾಮಕೃಷ್ಣ ಭಟ್ ಸ್ವಾಗತಿಸಿ ಕಾರ್ಯಕ್ರಮದ ಅಧ್ಯಕ್ಷರನ್ನು ಪರಿಚಯಿಸಿದರು. ಅತಿಥೇಯರಾದ ರಾಮಕೃಷ್ಣ ಭಟ್ ಮತ್ತು ಪದ್ಮಾವತಿ ದಂಪತಿಗೆ ಹೂ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ಸುಬ್ರಹ್ಮಣ್ಯ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.