ಫಿಲೋಮಿನಾ ಪ.ಪೂ ಕಾಲೇಜಿಗೆ ‘ಪ್ರತಿಭೋತ್ಸವ – 2024’ ಅಂತರ್ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳು

0

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಾಲೇಜಿನಲ್ಲಿ ನಡೆದ ‘ಪ್ರತಿಭೋತ್ಸವ-2024’ ಅಂತರ್ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ಶಾಸ್ತ್ರೀಯ ಸಂಗೀತದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಪ್ರಾರ್ಥನಾ. ಬಿ ಪ್ರಥಮ, ಇಂಗ್ಲೀಷ್ ಭಾಷಣದಲ್ಲಿ ಫಲಕ್ ಪ್ರಥಮ, ಭರತನಾಟ್ಯದಲ್ಲಿ ಅಂಗೀಕ ಶೆಟ್ಟಿ ದ್ವಿತೀಯ, ಗೂಗಲ್ ಇಟ್ ಸ್ಪರ್ಧೆಯಲ್ಲಿ ಸ್ಕಂದ ತೇಜ ಮತ್ತು ಮೊಹಮ್ಮದ್ ಘಲಿಲ್ ದ್ವಿತೀಯ, ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಗಗನ್ ಮತ್ತು ಯಶ್ವಂತ್ ಪ್ರಥಮ, ಹಿಂದಿ ಭಾಷಣದಲ್ಲಿ
ದ್ವಿತೀಯ ವಾಣಿಜ್ಯ ವಿಭಾಗದ ಸಕೀನ ಐಮನ್ ದ್ವಿತೀಯ, ದೇಶಭಕ್ತಿ ನೃತ್ಯ ರೂಪಕದಲ್ಲಿ ತ್ರಿಶಾ ಕೆ ಬಿ, ಸುದೀಕ್ಷಾ, ಜ್ಞಾನ್ವಿ, ಮೇಘನಾ, ಇಂಚರ, ನಿಶ್ಮಿತಾ, ರೋಸ್ ಮರಿಯಾ, ಪ್ರಿನ್ಸಿ ಸಿಲ್ವಿ ಲೋಬೋ  ದ್ವಿತೀಯ ಸ್ಥಾನ ಹಾಗೂ ರಸಪ್ರಶ್ನೆಯಲ್ಲಿ  ಸೃಧನ್ ಆಳ್ವ  ಮತ್ತು ಅರುಣ್ ನೋಯೆಲ್ ಡಿ ಸೋಜಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.  ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನಾ ರಾವ್, ರಶ್ಮಿ ಪಿ.ಎಸ್ ಹಾಗೂ ಭರತ್ ಜಿ. ಪೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here