ಮಹಿಳೆಯರು ಯಾವುದೇ ವಿಷಯದಲ್ಲೂ ಅಂಜಬಾರದು: ಎಸ್.ಐ ಭವಾನಿ
ಪುತ್ತೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು,ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು,ಮಹಿಳಾ ಠಾಣೆ ಪುತ್ತೂರು,ಅಂಚೆ ಇಲಾಖೆ ಪುತ್ತೂರು,ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಕೇಂದ್ರಗಳ ಒಕ್ಕೂಟ ದ.ಕ, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು,ಮಕ್ಕಳ ಹಕ್ಕುಗಳ ಮಾಸೋತ್ಸವದ ಪ್ರಯುಕ್ತ ಮಹಿಳಾ ದೌರ್ಜನ್ಯ ತಡೆ ದಿನದ ಅಂಗವಾಗಿ ಮುಕ್ರಂಪಾಡಿ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಕಾನೂನು ಮಾಹಿತಿ ಕಾರ್ಯಕ್ರಮ ನ.25 ರಂದು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಕಾರ್ಯದರ್ಶಿ ಮಮತಾ ಸುವರ್ಣರವರು ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಮಹಿಳಾ ಠಾಣೆಯ ಸಬ್ ಇನ್ಸ್ ಪೆಕ್ಟರ್ ಭವಾನಿ ಯವರು ಮಾತನಾಡಿ ,ಮಹಿಳೆಯರು ಯಾವುದೇ ವಿಷಯಕ್ಕೆ ಅಂಜದೆ ಧೈರ್ಯ ದಿಂದ ತಮ್ಮ ಸಮಸ್ಯೆಗಳನ್ನು ಅಧ್ಯಾಪಕರು ಮತ್ತು ಹೆತ್ತವರು ಹಾಗೂ ಕಾನೂನು ಪಾಲಕರಾದ ಪೊಲೀಸರೊಂದಿಗೆ ಚರ್ಚಿಸಿ ಪರಿಹರಿಸಬೇಕೆಂದು ಹಾಗೂ ಪೋಸ್ಕೋ ಕಾಯಿದೆ ಸೈಬರ್ ಅಪರಾಧ, ಲೈಂಗಿಕ ದೌರ್ಜನ್ಯ ಮಕ್ಕಳ ಸಹಾಯವಾಣಿ ತುರ್ತು ಕರೆ ಮತ್ತು ಮಕ್ಕಳ ಹಕ್ಕುಗಳು, ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಪುತೂರ್ದ ಮುತ್ತು ಇದರ ಅಧ್ಯಕ್ಷರಾದ ವೇದಾವತಿ,ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ರಫೀಕ್ ದರ್ಬೆ, ಪೇನಲ್ ಅಡ್ವಕೇಟ್ ಅಶ್ವಿನಿ, ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷೆ ರೋಹಿಣಿ ರಾಘವ ರವರು ಉಪಸ್ಥಿತರಿದ್ದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಸುಮಂಗಲ ಶೆಣೈಯವರು ಕಾರ್ಯಕ್ರಮ ನಿರೂಪಿಸಿ ಕಾಲೇಜು ಪ್ರಿನ್ಸಿಪಾಲರಾದ ಪ್ರಮಿಳಾ ಜೆಸ್ಸಿ ಕ್ರಾಸ್ತಾರವರು ವಂದಿಸಿದರು.