ಪುತ್ತೂರು: ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಹಾಗೂ ವಿದೇಶದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣಕ್ಕೆ ನೀಡಿದ ನಿರಂತರ ಸೇವೆಗೆ ಮಾನ್ಯತೆ ನೀಡುತ್ತಾ ಬಂದಿರುವ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಹಾಗೂ ಲೇಖಕ ಪ್ರೊ|ಸ್ಟೀವನ್ ಕ್ವಾಡ್ರಸ್ ಪೆರ್ಮುದೆರವರನ್ನು ತಿರುವನಂತಪುರಂ ಭಾರತ್ ಭವನದಲ್ಲಿ ಸನ್ಮಾನ ಮಾಡಲಾಯಿತು.
ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಇವುಗಳ ಜಂಟಿ ಆಶ್ರಯದಲ್ಲಿ ಪ್ರೊ|ಸ್ವೀವನ್ ಕ್ವಾಡ್ರಸ್ ರವರಿಗೆ ಈ ಸನ್ಮಾನವನ್ನು ಪುರಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಕೇರಳ ಸರ್ಕಾರದ ಸಂಸದ ಕಡವಪಳ್ಳಿ ರಾಮಚಂದ್ರನ್, ಜಿ.ಆರ್ ಅನಿಲ್ , ಶಾಸಕ ನೆಲ್ಲಿಕುನ್ನು ಕಾಸರಗೋಡು, ಅಶ್ರಫ್ ಮಂಜೇಶ್ವರ್ ಉಪಸ್ಥಿತರಿದ್ದರು.