ಪುತ್ತೂರು: ಮಂಗಳೂರಿನ ಕಾವೂರಿನಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠದಲ್ಲಿ ನ.26ರಂದು ನಡೆದ ಶಾಖಾ ಮಠದ ರಜತ ಮಹೋತ್ಸವ ಸಮಾರಂಭದಲ್ಲಿ ಉಪ್ಪಿನಂಗಡಿಯ ಉದ್ಯಮಿ ಸಚಿನ್ ಸುಂದರ ಗೌಡ ಅವರಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಪ್ರಶಸ್ತಿ ಪ್ರದಾನಮಾಡಿದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಾಸಕ ಡಾ.ವೈ.ಭರತ್ ಶೆಟ್ಟಿ, ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಮಂದಿ ಉಪಸ್ಥಿತರಿದ್ದರು.
ಸಚಿನ್ ಸುಂದರ ಗೌಡ ಅವರು ಪುಟ್ಟ ಕಟ್ಲೇರಿ ಅಂಗಡಿ ಮೂಲಕ ಸ್ವಂತ ಉದ್ಯಮದ ಕಡೆಗೆ ಕಾಲಿಟ್ಟು ಶಾಮಿಯಾನ, ಸಚಿನ್ ಕೋಲ್ಡ್ ಹೌಸ್, ಸವಿತಾ ಸ್ವೀಟ್ಸ್ ಸಂಸ್ಥೆ ಆರಂಭಿಸಿದ್ದರು. 2019ರಲ್ಲಿ ಸಚಿನ್ ಬೇಕ್ಸ್ ಮತ್ತು ಐಸ್ಕ್ರೀಮ್ ಸಂಸ್ಥೆ ಆರಂಭಿಸಿ ಪ್ಲೇಮ್ಸ್ ಐಸ್ಕ್ರೀಮ್,ಸವಿತಾಸ್ ಸ್ವೀಟ್ಸ್ ಮತ್ತು ಕೇಕ್ಸ್ ಎನ್ನುವ ಹೆಸರಿನಲ್ಲಿ ಮುನ್ನಡೆಸುತ್ತಿದ್ದಾರೆ. ಇವರು ಸುಮಾರು 175 ಮಂದಿ ಉದ್ಯೋಗದಾತರಾಗಿದ್ದಾರೆ. ಇವರ ಸಾಧನೆ ಪರಿಗಣಿಸಿ ಕರಾವಳಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.