ಉಪ್ಪಿನಂಗಡಿ: ಮಾದಕ ವಸ್ತು ಸೇವನೆ, ಮಾರಾಟಕ್ಕೆ ಯತ್ನ- ಆರೋಪಿಯ ಬಂಧನ

0

ಉಪ್ಪಿನಂಗಡಿ: ಮಾದಕ ವಸ್ತುವಿನ ಸೇವನೆ ಮತ್ತು ಮಾದಕ ವಸ್ತುವಿನ ಮಾರಾಟದ ಯತ್ನದಲ್ಲಿದ್ದ ವ್ಯಕ್ತಿಯನ್ನು ಪೆರ್ನೆ ಎಂಬಲ್ಲಿ ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ಪ್ರಕರಣ ದಾಖಲಿಸಿರುವ ಬಗ್ಗೆ ವರದಿಯಾಗಿದೆ.


ಕೌಕ್ರಾಡಿ ಗ್ರಾಮದ ದೋಂತಿಲ ಮನೆ ನಿವಾಸಿ ಇಸ್ಮಾಯಿಲ್ ಎಂಬವರ ಮಗನಾದ ಮಹಮ್ಮದ್ ತೌಫೀಕ್ (22) ಬಂಧಿತ ಆರೋಪಿ. ಗಸ್ತು ನಿರತ ಪೊಲೀಸರು ಶನಿವಾರ ಫೂರ್ವಾಹ್ನ 11 ಗಂಟೆ ಸುಮಾರಿಗೆ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆಟೋ ರಿಕ್ಷಾವೊಂದು ನಿಲ್ಲಿಸಲು ನೀಡಿದ ಸೂಚನೆಯನ್ನು ದಿಕ್ಕರಿಸಿ ಮುಂದಕ್ಕೆ ಸಾಗಿದಾಗ ಪೊಲೀಸರು ಬೆನ್ನಟ್ಟಿ ರಿಕ್ಷಾ ಚಾಲಕನ್ನು ಹಿಡಿದಿದ್ದರು. ಆಗ ಆಟೋ ಚಾಲಕ ಮುಹಮ್ಮದ್ ತೌಫೀಕ್ ತಾನು ಮಾದಕ ವಸ್ತು ಎಂಡಿಎಂಎ ನ್ನು ಸೇವಿಸಿದ್ದಾಗಿ , ತನ್ನ ಸೇವನೆ ಹಾಗೂ ಮಾರಾಟಕ್ಕಾಗಿ ಪೆರ್ನೆಯ ಸೆಲಿಂ ಎಂಬಾತ ಮಾದಕ ವಸ್ತುವನ್ನು ತನಗೆ ನೀಡಿದ್ದಾನೆಂದು ಪೊಲೀಸರ ವಿಚಾರಣೆ ವೇಳೆ ತಿಳಿಸಿರುತ್ತಾನೆ.
ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here