ಪುತ್ತೂರು: ಸರ್ವೆ ಭಕ್ತಕೊಡಿ ಎಸ್ ಜಿ ಎಂ ಪ್ರೌಢಶಾಲೆಯ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಇಂದುಶೇಖರ ಪಿ ಬಿ ವಹಿಸಿದ್ದರು. ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಂಸ್ಥೆ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತರು, ಅಂಕಣಕಾರರು, ವಿದ್ಯಾರ್ಥಿ ರಾಜ್ಯ ತರಬೇತಿದಾರರು, ಡಿವೈನ್ ಪಾರ್ಕ್ ಟ್ರಸ್ಟ್ ನ ಅಧಿಕಾರಿ ಪ್ರಕಾಶ್ ಕುಮಾರ್ ಶೆಟ್ಟಿ ಮಾತನಾಡಿ ಕಲಿಕೆಗೆ ಆಸಕ್ತಿ ಅಗತ್ಯ, ಪ್ರತಿಭೆಗೆ ಪ್ರೋತ್ಸಾಹ ಅಗತ್ಯ ನಾಡಿನ ಒಳಿತಿಗೆ ಯುವಶಕ್ತಿ ಪ್ರೇರಣೆ ಹಾಗು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ, ತಾಳ್ಮೆ ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮುಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಏನ್ ಎಸ್ ಡಿ ಹಾಗೂ ಮುಂಡೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಆಡಳಿತ ಮಂಡಳಿ ಸದಸ್ಯ ಕಮಲೇಶ್ ಎಸ್ ವಿ ಅವರು ಉಪಸ್ಥಿತರಿದ್ದರು.
ಇಂದುಶೇಖರ ಪಿ ಬಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲ ಸಂಚಾಲಕ ಡಾ. ಯಾದವಿ ಜಯಕುಮಾರ್ ಆಡಳಿತ ಮಂಡಳಿ ಸದಸ್ಯರು ಶಶಿಧರ್ ಎಸ್ ಡಿ, ಮಹಾಬಲ ರೈ ,ಜಯಂತ್ ಬೇಕಲ್, ರಾಜಶ್ರೀ , ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್ ಡಿ , ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಸಾಧಕ ಹಿರಿಯ ವಿದ್ಯಾರ್ಥಿ ಜಯಕುಮಾರ್ ಹಾಗೂ ಉದಯ ಬಂಗೇರ ಅವರಿಗೆ ದಿವಂಗತ ಮುಖ್ಯ ಗುರು ಶ್ರೀ ವೆಂಕಟರಮಣ ಗೌಡರವರ ಸ್ಮರಣಾರ್ಥ ಸನ್ಮಾನಿಸಲಾಯಿತು. 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಕೃಪಾ ಕೆ, ಕೆ ಭವಿಷ್ಯ ,ಶ್ರೇಯ ,ಮಹಮ್ಮದ್ ತಶ್ರೀಫ್, ಪ್ರಜ್ವಲ್ ಬಿ.ವಿ, ವಂದಿತಾ ಬಿ ಎಂ ,ಸಫಾ ಫಾತಿಮಾ, ಮಹಮ್ಮದ್ ಅನಾಸ್,ಮಹಮ್ಮದ್ ಸುಹೈಲ್ , ನಮೃತಾ ಕೆ, ಹಾಗೂ ತಿಲಕ್ ಇವರುಗಳನ್ನು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಸಂಚಾಲಕಿ ಯಾದವಿ ಜಯಕುಮಾರ್ ಸ್ವಾಗತಿಸಿ, ವಿಜ್ಞಾನ ಶಿಕ್ಷಕ ಮೋಹನ್ ಕುಮಾರ್ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.