ಫ್ರೆಂಡ್ಸ್‌ ಪೋಳ್ಯ ಆಶ್ರಯದಲ್ಲಿ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾಟ

0

ಪುತ್ತೂರು: ಫ್ರೆಂಡ್ಸ್‌ ಪೋಳ್ಯ ಆಶ್ರಯದಲ್ಲಿ 7 ತಂಡಗಳ ಲೀಗ್‌ ಮಾದರಿಯ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾಟ ಡಿ.1ರಂದು ಪೋಳ್ಯದಲ್ಲಿ ನಡೆಯಿತು.

ಕರ್ನಾಟಕ ವಾಲಿಬಾಲ್‌ ಅಸೋಸಿಯೇಶನ್‌ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ರಾಷ್ಟ್ರೀಯ ವಾಲಿಬಾಲ್‌ ತರಬೇತುದಾರ ಪಿ ವಿ ನಾರಾಯಣ, ಕಬಕ ಗ್ರಾ.ಪಂ ಸದಸ್ಯ ಶಾಬ, ಫಾರೂಕ್‌ ತವಕ್ಕಲ್‌, ಮಾಜಿ ಅಧ್ಯಕ್ಷ ವಿನಯಕುಮಾರ್‌ , ಉದ್ಯಮಿ ನೂರುದ್ದೀನ್‌ ಪೋಳ್ಯ, ಹಿರಿಯ ವಾಲಿಬಾಲ್‌ ಆಟಗಾರ ಉಸ್ಮಾನ್‌ ಮಿತ್ತೂರು, ದಾಮೋದರ ಶೇವಿರೆ, ಇಸ್ಮಾಯಿಲ್‌ ಬ್ರೈಟ್‌ ಪೋಳ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ವಿಜೇತ ಡಾ. ಕೆ ಬಿ ರಾಜಾರಾಂ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ವಿದ್ಯಾ ಶ್ರೀ ಫ್ರೆಂಡ್ಸ್‌ ಚಾರಿಟೇಬಲ್‌ ಟ್ರಸ್ಟ್‌ ನ ಸಂಚಾಲಕ ಪ್ರಸಾದ್‌ ಪಾಣಾಜೆ, ಕರ್ನಾಟಕ ವಾಲಿಬಾಲ್‌ ಅಸೋಸಿಯೇಶನ್‌ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಫಾರೂಕ್‌ ಪೆರ್ನೆ, ಹಸೈನಾರ್‌ ಬನಾರಿ, ರಶೀದ್‌ ಮುರ, ಜಾನ್ಸನ್‌ ಕೆದುವಡ್ಕ, ಸಂತೋಷ್‌ ಕುಮಾರ್‌ ಮುರ, ಮಹಮ್ಮದ್‌ ರಫೀಕ್‌ ಮಲ್ನಾಡ್‌, ರಿಝ್ವಾನ್‌ ಮುರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here