ಪುತ್ತೂರು:ತಾಲೂಕು ಪಂಚಾಯತ್ ಪುತ್ತೂರು ಹಾಗೂ ಬಲ್ನಾಡು ಗ್ರಾಮ ಪಂಚಾಯತ್‌ನ ಸಹಯೋಗದಲ್ಲಿ ಪ.ಜಾತಿ ಮತ್ತು ಪ.ಪಂಗಡದವರಿಗೆ ಆರೋಗ್ಯ ಮಾಹಿತಿ ಮತ್ತು ಕಾನೂನು ಅರಿವು-ನೆರವು ಶಿಬಿರವು ಡಿ.2ರಂದು ಕೂಟೇಲು ಪ.ಜಾತಿ ಕಾಲನಿಯ ಕುಟ್ಟಿ ನಲಿಕೆಯವರು ಮನೆಯಂಗಲದಲ್ಲಿ ನಡೆಯಿತು.
ನ್ಯಾಯವಾದಿ ವಿರೂಪಾಕ್ಷ ಭಟ್ ಮಚ್ಚಿಮಲೆ ಕಾನೂನು ಅರಿವು-ನೆರವು ಮಾಹಿತಿಯನ್ನು ನೀಡಿದರು. ಉಜ್ರುಪಾದೆ ಆರೋಗ್ಯ ಉಪಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಯಶೋಧರ್‌ರವರು ಆರೋಗ್ಯ ಮಾಹಿತಿ ನೀಡಿದರು.
ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಬಿ.ಆರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರವಿಚಂದ್ರ ಎಸ್, ಸದಸ್ಯರಾದ ವಸಂತಿ, ಶೋಭಾ ಎಂ., ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹಿರಿಯ ದೈವ ನರ್ತಕ ಕುಟ್ಟಿ ನಲಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಕುಮಾರ್ ರೈ, ಸಾಜ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ ನಾಯಕ್, ಪ್ರವೀಣ್ ಭಟ್ ಹಸಂತಡ್ಕ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೃಷ್ಣಪ್ಪ ಸ್ವಾಗತಿಸಿದರು. ಭಾಸ್ಕರ ಕೆ.ಕಾರ್ಯಕ್ರಮ ನಿರೂಪಿಸಿದರು. ಬಲ್ನಾಡು ಗ್ರಾ.ಪಂ ಕಾರ್ಯದರ್ಶಿ ಲಕ್ಷ್ಮೀ ಎಂ. ಪೆರುವಾಯಿ ವಂದಿಸಿದರು. ಸಿಬಂದಿಗಳು ಸಹಕರಿಸಿದರು.