ಬಡಗನ್ನೂರು: ಪಡುಮಲೆ ಶ್ರೀ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಶಾಸ್ತಾರ ಟ್ರೋಫಿ 2024 ವಾಲಿಬಾಲ್ ಪಂದ್ಯಾವಳಿ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಎದುರು ಗದ್ದೆಯಲ್ಲಿ ಡಿ.1 ರಂದು ನಡೆಯಿತು.
ಡಾ.ರಮಾ ಸಿ ಭಂಡಾರಿ ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಜಯಂತ ರೈ ಕುದ್ಕಾಡಿ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಬಿ.ಮಹಾಲಿಂಗ ಭಟ್ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಅಂಕಣ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಕೃಷ್ಣ ಪ್ರಸಾದ್ ರೈ ಕೆಳಗಿನ ಮನೆ ಪಡುಮಲೆ ಟ್ರೋಫಿ ಅನಾವರಣ ಗೊಳಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಸಿವಿಲ್ ಇಂಜಿನಿಯರ್ ಡಾ ರವೀಶ್ ಪಡುಮಲೆ ಮಾತನಾಡಿ, ಧಾರ್ಮಿಕ ಕಾರ್ಯ ಮತ್ತು ಕ್ರೀಡೆ ಮುಖಾಂತರ ಯುವ ಸಮೂಹವನ್ನು ಒಟ್ಟು ಗೂಡಿಸಲು ಸಾಧ್ಯ.
ಶಾಸ್ತಾರ ಸ್ಪೋರ್ಟ್ಸ್ ಸದಸ್ಯರು ಹಲವು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿದ್ದಾರೆ. ಮುಂದೆ ಇನ್ನಷ್ಟು ಸಾಮಾಜಿಕ ಕಾರ್ಯ ಮೂಲಕ ಮಾದರಿಯಾಗಿ ಸಂಘಟನೆಯಾಗಿ ಬೆಳಗಲಿ ಎಂದ ಅವರು ಪಂದ್ಯಾಟದಲ್ಲಿ ಸಹೋದರ ಬಾತೃತ್ವದಲ್ಲಿ ಆಟ ಆಡುವಂತೆ ಕರೆ ನೀಡಿ ಶುಭ ಹಾರೈಸಿದರು.
ಸುಳ್ಯಪದವು ಬಾಲಸುಬ್ರಹ್ಮಣ್ಯ ಹಿ.ಪ್ರಾ.ಶಾಲಾ ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಬಸವಹಿತ್ತಿಲು ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು.ಧರ್ಮಸ್ಥಳ ಕೇಂದ್ರ ಕಚೇರಿ ಸಂಪೂರ್ಣ ಸುರಕ್ಷಾ ವಿಭಾಗ ಯೋಜನಾಧಿಕಾರಿ ನಾರಾಯಣ ಪಾಟಾಳಿ ಬಡಕ್ಕಾಯೂರು ರವರು ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮವು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸನ್ಮಾನ ಕಾರ್ಯಕ್ರಮ
ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟು ಕುಮಾರಿ ತನುಶ್ರೀ ರೈ ಬಡಕ್ಕಾಯೂರು ರವರ ಪರವಾಗಿ ಮಾತೃಶ್ರೀ ಶೋಭಾ ರೈ ಬಡಕ್ಕಾಯೂರು ರವರನ್ನು ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಬಿರ್ನೋಡಿ ಶಾಲು ಹೊದಿಸಿ ಹಾರ ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಿದರು.
ವೇದಿಕೆಯಲ್ಲಿ ಉದ್ಯಮಿ ಸುಧಾಕರ ಶೆಟ್ಟಿ ಮಂಗಳಾದೇವಿ ಮುಡಿಪಿನಡ್ಕ,ಪ್ರಗತಿಪರ ಕೃಷಿಕ ಚಂದ್ರಶೇಖರ ಭಂಡಾರಿ ನಲಿಕೆಮಜಲು, ಮನೋಹರ ಪ್ರಸಾದ್ ರೈ ಮೇಗಿನ ಮನೆ ಪಡುಮಲೆ , ಬಡಗನ್ನೂರು ಗ್ರಾ.ಪಂ ಸದಸ್ಯರಾದ ಸುಜಾತ ಮೈಂದನಡ್ಕ, ಲಿಂಗಪ್ಪ ಗೌಡ ಮೋಡಿಕೆ, ವಿನಾಯ ಗೌಡ ಸುಳ್ಯಪದವು, ಉಪಸ್ಥಿತರಿದ್ದರು.
ಕ್ಲಬಿನ ಸದಸ್ಯ ಸುರೇಶ್ ರೈ ಪಲ್ಲತ್ತಾರು ಸ್ವಾಗತಿಸಿ, ವಂದಿಸಿದರು ಪುತ್ತೂರು ಲಿಟ್ಲ್ ಪ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭವು ಕ್ಲಬಿನ ಗೌರವಾಧ್ಯಕ್ಷ ಸಂತೋಷ ಆಳ್ವ ಗಿರಿಮನೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಪುತ್ತೂರು ಹಿಂದೂ ಮುಖಂಡ ಅರುಣ್ ಕಮಾರ್ ಪುತ್ತಿಲ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಮಾಡಿ ಯವ ಸಮುದಾಯವನ್ನು ವಾಲಿಬಾಲ್ ಪಂದ್ಯಾಟದ ಮುಖಾಂತರ ಕ್ರೀಡೆ ಶಕ್ತಿ ನೀಡುವ ಪ್ರಾಮಾಣಿಕ ಕೆಲಸ ಪಡುಮಲೆ ಸ್ಪೋರ್ಟ್ಸ್ ಕ್ಲಬ್ ಮುಖಾಂತರ ನಡೆಯುತ್ತಿದೆ.ಇವತ್ತು ಬೇರೆ ಬೇರೆ ಸಂಗತಿಯಲ್ಲಿ ನಡುವೆ ಯುವಕರ ಶಕ್ತಿ ವ್ಯಯವಾಗುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ವ್ಯವಸ್ಥೆ ಅಡಿಯಲ್ಲಿ ಯುವಕರು ಇರಬೇಕು. ಸಾಮಾಜದ ಸ್ವಾಸ್ಥ್ಯವನ್ನು ಅಳಿಸದಂತೆ ಸಂಕಲ್ಪವನ್ನು ಮಾಡಿದಾಗ ಒಳ್ಳೆಯ ಸಮಾಜದ ನಿರ್ಮಾಣ ಮಾಡುವ ಸಾಧ್ಯ ಎಂಬ ದೃಷ್ಟಿಕೋನದಿಂದ ಗ್ರಾಮೀಣ ಪ್ರದೇಶದಲ್ಲಿ ವಾಲಿಬಾಲ್ ಪಂದ್ಯಾಟ ಮಾಡುವ ಮೂಲಕ ಸ್ಥಳೀಯ ಕ್ರೀಡಾಪಟುಗಳನ್ನು ಒಂದು ಗೂಡಿಸಿ ಕ್ರೀಡೆಗೆ ಶಕ್ತಿ ಕೊಡುವ ಕೆಲಸ ಪಡುಮಲೆ ಸ್ಪೋರ್ಟ್ಸ್ ಕ್ಲಬ್ ಮಾಡುತ್ತಿದೆ. ಈ ಪಂದ್ಯಾಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಯಶಸ್ವಿಯಾಗಿ ನಡೆಯಲು ಸಹಕರಿಸುವಂತೆ ಕರೆ ನೀಡಿದರು.
ವಾಲಿಬಾಲ್ ದೇಶ ಕ್ರೀಡೆ,ಮತ್ತು ನಮ್ಮ ಮಣ್ಣಿನ ಕ್ರೀಡೆ ಸಹಜ್ ರೈ ಬಳಜ್ಜ
ಪುತ್ತೂರು ವಿಜಯ ಸಾಮ್ರಾಟ್ (ರಿ.) ಸ್ಥಾಪಾಕಧ್ಯಕ್ಷ ಸಹಜ್ ಜೆ. ರೈ ಬಳಜ್ಜ ರವರು ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಉತ್ತಮ ರೀತಿಯಲ್ಲಿ ಕ್ರೀಡಾಕೂಟ ಆಯೋಜನೆ ಮಾಡಿದ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ಅವರು ವಾಲಿಬಾಲ್ ನಮ್ಮ ದೇಶದ ಕ್ರೀಡೆ ಮತ್ತು ನಮ್ಮ ಮಣ್ಣಿನ ಕ್ರೀಡೆ ಅದನ್ನು ವಾಲಿಬಾಲ್ ಪಂದ್ಯಾಟದ ಮುಖಾಂತರ ಸ್ಥಳೀಯ ಪ್ರತಿಭೆ ಅವಕಾಶ ಅಭಿನಂದನೆ ಸಲ್ಲಿಸಿ ಮುಂದೆ ಕ್ರೀಡೆಯೊಂದಿಗೆ ಇತರ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮ ಮಾಡುವ ಮೂಲಕ ಮಾದರಿ ಸಂಘಟನೆಯಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಮಂಗಳೂರು ಶ್ರೀ ಕಟೀಲ್ ಲಾಜಿಸ್ಟಿಕ್ಸ್, ಮಾಲಕ ಜನಾರ್ದನ ಪೂಜಾರಿ ಪದಡ್ಕ ರವರು ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು .ಕಾರ್ಯಕ್ರಮವು ಬಡಗನ್ನೂರು ಗ್ರಾ. ಪಂ ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ ಪಡುಮಲೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಉದ್ಯಮಿ ಶ್ರೀನಿವಾಸ ಗೌಡ ಕನ್ನಯ , ಬಡಗನ್ನೂರು ಗ್ರಾ.ಪಂ ಸದಸ್ಯ ವೆಂಕಟೇಶ್ ಕನ್ನಡ್ಕ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಅಡಳಿತ ಮಂಡಳಿ ಸದಸ್ಯ ರಾಮಚಂದ್ರ ಮಣಿಯಾಣಿ ಬೋಳುಂಬುಡೆ, ಪಡುಮಲೆ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ,ಪುತ್ತಿಲ ಪರವಾರ ಪ್ರದಾನ ಕಾರ್ಯದರ್ಶಿ ರವಿ ಕುಮಾರ್, ಕಲ್ಯಾಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮನಿಶ್ ಕಲಾಲ್.ಉಪಸ್ಥಿತರಿದ್ದರು. ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಸದಸ್ಯ ಸುರೇಶ್ ರೈ ಪಲ್ಲತ್ತಾರು ಸ್ವಾಗತಿಸಿ ,ವಂದಿಸಿದರು ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿತರಣೆ
ವಾಲಿಬಾಲ್ ಪಂದ್ಯಾಟದಲ್ಲಿ ಟಿಮ್ ಶಾಸ್ತಾರ ಪ್ರಥಮ ಸ್ಥಾನ ಪಡೆದು ನಗದು ಬಹುಮಾನ 7024 ಮತ್ತು ಶಾಸ್ತಾರ ಟ್ರೋಫಿ ಪಡೆದುಕೊಂಡಿತು.
ದ್ವಿತೀಯ ಬಹುಮಾನವನ್ನು ವೃತ್ವಿ ಚಾಲೆಂಜರ್ ಪದಡ್ಕ 5024 ಹಾಗೂ ಶಾಸ್ತಾರ ಟ್ರೋಫಿ ಪಡೆದುಕೊಂಡಿತು.
ತೃತೀಯ ಬಹುಮಾನವನ್ನು ಕುದ್ಕಾಡಿ ಸ್ಟೈಕರ್ಸ್ 3024 ಮತ್ತು ಟ್ರೋಫಿ ಹಾಗೂ ಚತುರ್ಥ ಬಹುಮಾನವನ್ನು ಎಸ್ ಕೆ ವೈ.ಸಿ ಪಟ್ಟೆ ನಗದು 2024 ಮತ್ತು ಟ್ರೋಫಿ ಪಡೆದುಕೊಂಡಿತು.ಹಾಗೂ ವೈಯಕ್ತಿಕ ಬಹುಮಾನ ನೀಡಲಾಯಿತು.