ಕಾವು: ಚಾಕೋಟೆಗೆ ಬಂದ ಕಾಡಾನೆಗಳು – ಕೃಷಿಗೆ ಹಾನಿ

0

ಪುತ್ತೂರು: ಕೆಲವು ದಿನಗಳ ಹಿಂದೆ ಮಾಡ್ನೂರು ಗ್ರಾಮದ ಅಂಕೊತ್ತಿಮ್ಮಾರ್‌ ಎಂಬಲ್ಲಿ ಹಲವರ ತೊಟಕ್ಕೆ ನುಗ್ಗಿ ಕೃಷಿಗೆ ಹಾನಿ ಮಾಡಿದ್ದ ಎರಡು ಕಾಡಾನೆಗಳು ಕಳೆದ ರಾತ್ರಿ ಮತ್ತೆ ಪ್ರತ್ಯಕ್ಷಗೊಂಡಿದೆ.

ಆದರೆ ಈ ಬಾರಿ ಕಾಡಾನೆ ಪ್ರತ್ಯಕ್ಷಗೊಂಡಿರುವುದು ಮಾಡ್ನೂರು ಗ್ರಾಮದ ಕಾವು ಚಾಕೋಟೆಯಲ್ಲಿ. ಇಲ್ಲಿನ ಸ್ಥಳೀಯ ನಿವಾಸಿಗಳಾದ ಶೇಷಪ್ಪ ಗೌಡ ಚಾಕೋಟೆ ಮತ್ತು ದಿನೇಶ್‌ ಗೌಡ ಚಾಕೋಟೆ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಕೃಷಿ ನಾಶಕ್ಕೆ ಕಾರಣವಾಗಿದ್ದು, ತೆಂಗು, ಅಡಿಕೆ ಮತ್ತು ಬಾಳೆಗಿಡಗಳಿಗೆ ಹಾನಿ ಮಾಡಿದೆ.

ಈ ಭಾಗದಲ್ಲಿ ಕಳೆದ ಹಲವು ಸಮಯದಿಂದ ಕಾಡಾನೆಗಳು ಹಲವರ ಕೃಷಿತೋಟಕ್ಕೆ ನುಗ್ಗಿ ಹಾನಿ ಮಾಡುತ್ತಿದ್ದು, ಇದರಿಂದ ಕೃಷಿಕರಿಗೆ ನಷ್ಟ ಒಂದೆಡೆಯಾದರೆ, ಮತ್ತೊಂದೆಡೆ ಭಯದಿಂದ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆ ಈ ಕುರಿತು ಗಮನಹರಿಸಿ ಕಾಡಾನೆಗಳನ್ನು ಹಿಡಿದು, ಕಾಡಾನೆಗಳಿಂದಾಗುತ್ತಿರುವ ಉಪಟಳಕ್ಕೆ ಪೂರ್ಣ ವಿರಾಮ ಹಾಕುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here