ಪ್ರತಿಭಾಕಾರಂಜಿಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

0

ಪುತ್ತೂರು: ಶಾಲಾಶಿಕ್ಷಣ ಇಲಾಖೆ, ಪುತ್ತೂರು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ವಿವೇಕಾನಂದ ಕನ್ನಡಮಾದ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್29ಮತ್ತು30ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಪ್ರತಿಭಾಕಾರಂಜಿ “ಸದೃಶಸಂಭ್ರಮ-2024 “ರಲ್ಲಿ ಪ್ರೌಢವಿಭಾಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 10ನೇತರಗತಿಯ ವೈಷ್ಣವಿ ಪೈ ಇಂಗ್ಲೀಷ್ ಪ್ರಥಮ, 9ನೇತರಗತಿಯ ನಿಲಿಷ್ಕಾ ಚಿತ್ರಕಲೆಯಲ್ಲಿ ಪ್ರಥಮ, ಹಿರಿಯರ ವಿಭಾಗದಲ್ಲಿ 7ನೇತರಗತಿಯ ರಚನಾ ಬಾರ್ಯಾ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ ಬಹುಮಾನ ಪಡೆದು ಡಿ.6ರಂದು ಬೆಳ್ತಂಗಡಿಯಲ್ಲಿ ನಡೆಯುವ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಗೆ ಆಯ್ಕೆಯಾಗಿರುತ್ತಾರೆ.

ಪ್ರೌಢವಿಭಾಗದಲ್ಲಿ 9ನೇತರಗತಿಯ ಕೀರ್ತನಾ ವರ್ಮ ಭರತನಾಟ್ಯದಲ್ಲಿ ದ್ವಿತೀಯ, 8ನೇ ತರಗತಿಯ ಸಾನ್ವಿ ಎಸ್. ಕನ್ನಡ ಭಾಷಣದಲ್ಲಿ ದ್ವಿತೀಯ, 9ನೇತರಗತಿಯ ಸುಪ್ರಜಾ ರಾವ್ ಜಾನಪದಗೀತೆಯಲ್ಲಿ ತೃತೀಯ ಮತ್ತು ಕಿರಿಯರವಿಭಾಗದಲ್ಲಿ 4ನೇತರಗತಿಯ ಸಾನ್ವಿ ಕಥೆ ಹೇಳುವುದರಲ್ಲಿ ತೃತೀಯ ಬಹುಮಾನಗಳಿಸಿರುತ್ತಾರೆ ಎಂದು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here