ನೆಲ್ಲಿಕಟ್ಟೆ ನಾಗ ಸನ್ನಿಧಿಗೆ ಹಾನಿ- ವ್ಯಕ್ತಿ ವಶಕ್ಕೆ

0

ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ನಾಗ ದೇವರ ಸನ್ನಿಧಿಗೆ ಅನ್ಯಮತೀಯ ವ್ಯಕ್ತಿಯೋಬ್ಬರು ಹಾನಿ ಮಾಡಿದ ಘಟನೆ ಡಿ.4ರ ರಾತ್ರಿ ನಡೆದಿದೆ. ಘಟನೆ ತಿಳಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.


ಜಿಡೆಕಲ್ಲು ನಿವಾಸಿ ಸಲಾಂ ಅವರು ನಾಗ ದೇವರ ಸನ್ನಿಧಿಯ ಆವರಣಕ್ಕೆ ಹಾನಿ ಮಾಡಿದವರೆನ್ನಲಾಗಿದೆ. ಅವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾತ್ರಿ ವೇಳೆ ವ್ಯಕ್ತಿಯೊಬ್ಬರು ನಾಗ ದೇವರ ಸನ್ನಿಧಿಯ ಆವರಣಕ್ಕೆ ಅಳವಡಿಸಿದ ಕಬ್ಬಿಣದ ಗ್ರಿಲ್ಸ್ ಅನ್ನು ತೆರವು ಮಾಡಿ ಒಳ ಹೋಗುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಕಾರಣಿಕದ ಕ್ಷೇತ್ರ:
ಕೊಪ್ಪರಿಗೆ ನಾಗ ಎಂದೇ ಕರೆಯಲ್ಪಡುವ ನೆಲ್ಲಿಕಟ್ಟೆಯ ನಾಗ ದೇವರ ಸನ್ನಿಧಿ ಕಾರಣಿಕ ಕ್ಷೇತ್ರವಾಗಿದೆ. ನಾಗ ಕಟ್ಟೆಯ ಒಳಗೆ ಶರ್ಟ್ ಬನಿಯಾನು ತೆಗೆದೇ ಒಳಗೆ ಪ್ರವೇಶಿಸುವ ನಿಯಮವಿದೆ. ಈ ನಿಟ್ಟಿನಲ್ಲಿ ಒಳಗೆ ಅಶುದ್ಧ ಆಗಬಾರದು ಎಂದು ಆವರಣದ ಸುತ್ತು ಕಬ್ಬಿಣದ ಗ್ರಿಲ್ಸ್ ಅಳವಡಿಸಲಾಗಿತ್ತು ಎಂದು ನಾಗದೇವರ ಸನ್ನಿಧಿ ಸಮಿತಿಯ ಪಿ.ಕೆ.ಗಣೇಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here