30 ಲಕ್ಷ ರೂ. ಶಾಸಕರ ಅನುದಾನದಲ್ಲಿ 34 ನೆಕ್ಕಿಲಾಡಿಯ ಮೈಂದಡ್ಕ- ದರ್ಬೆ ರಸ್ತೆ ಕಾಮಗಾರಿ ಆರಂಭ

0

ಉಪ್ಪಿನಂಗಡಿ: ಡಾಮರೆಲ್ಲಾ ಎದ್ದು ಹೋಗಿ ಸಂಪೂರ್ಣ ಹೊಂಡ- ಗುಂಡಿಗಳಿಂದ ಕೂಡಿ ಸಂಚಾರಕ್ಕೆ ಕಷ್ಟಸಾಧ್ಯವಾಗಿದ್ದ 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮೀಣ ಭಾಗವಾದ ಮೈಂದಡ್ಕ- ದರ್ಬೆ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಾಸಕರಾದ ಅಶೋಕ್ ಕುಮಾರ್ ರೈಯವರು 30 ಲಕ್ಷ ರೂ. ಅನುದಾನ ನೀಡಿದ್ದು, ಅದರ ಕಾಮಗಾರಿ ಡಿ.6ರಂದು ಆರಂಭಗೊಂಡಿದೆ.


ಮೈಂದಡ್ಕ- ದರ್ಬೆ ರಸ್ತೆಯ ಡಾಮರು ಸಂಪೂರ್ಣ ಎದ್ದು ಹೋಗಿದ್ದರಿಂದ ರಸ್ತೆಯಿಡೀ ಜಲ್ಲಿ ಕಲ್ಲುಗಳೇ ಹರಡಿಕೊಂಡಿತ್ತಲ್ಲದೆ, ಅಲ್ಲಲ್ಲಿ ಹೊಂಡ- ಗುಂಡಿಗಳು ನಿರ್ಮಾಣವಾಗಿತ್ತು. ಇದರಿಂದ ಈ ರಸ್ತೆಯ ಮೂಲಕ ಸಾಗುವ ವಾಹನ ಸವಾರರು ಸಂಕಷ್ಟ ಅನುಭವಿಸುವ ಸ್ಥಿತಿ ಬಂದೊದಗಿತ್ತು. ಈ ರಸ್ತೆಯನ್ನು ದುರಸ್ತಿಗೊಳಿಸಲು ಹಲವು ವರ್ಷಗಳಿಂದ ಈ ಭಾಗದ ಜನರ ಮುಖ್ಯ ಬೇಡಿಕೆಯಾಗಿತ್ತು. ಈ ಬಗ್ಗೆ 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ಅವರು ಶಾಸಕರ ಗಮನಕ್ಕೆ ತಂದಿದ್ದು, ದುರಸ್ತಿಗೆ ಅನುದಾನ ಕೋರಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಈ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ 30 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದರು. ಬಳಿಕ ಮಳೆಗಾಲ ಆರಂಭವಾಗಿದ್ದರಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಇಂದಿನಿಂದ ಇಲ್ಲಿನ ರಸ್ತೆಯ ಕಾಮಗಾರಿ ಆರಂಭಗೊಂಡಿದ್ದು, 4 ಮೀ. ಅಗಲ ಹಾಗೂ 318 ಮೀ. ಉದ್ದದ ಕಾಂಕ್ರೀಟ್ ರಸ್ತೆ ಇಲ್ಲಿ ನಿರ್ಮಾಣವಾಗಲಿದೆ.

LEAVE A REPLY

Please enter your comment!
Please enter your name here