ಪುತ್ತೂರು: ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮತ್ತು ಹೋಲಿ ರಿಡೀಮರ್ ಶಿಕ್ಷಣ ಸಂಸ್ಥೆಗಳು ಬೆಳ್ತಂಗಡಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕ.ಮಾಧ್ಯಮ ಶಾಲೆಯ ಶ್ರೀಕೃಷ್ಣ ಬಿ (ವೆಂಕಟೇಶ.ಬಿ ಮತ್ತು ಮಂಗಳ ಗೌರಿ ದಂಪತಿಗಳ ಪುತ್ರ) ಹಿರಿಯ ಪ್ರಾಥಮಿಕ ವಿಭಾಗದ ಆಶು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾನೆ.