ಪುತ್ತೂರು: ಅರಿಯಡ್ಕ ಗ್ರಾಮದ ಮಂಡೆಕೊಚ್ಚಿಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಸೌಮ್ಯ ಹಾಗೂ ಅವರ ಪತಿ ಬಾಲಸುಬ್ರಹ್ಮಣ್ಯ ಎಂಬವರ ವಿರುದ್ಧ ಮಂಡೆಕೊಚ್ಚಿ ನಿವಾಸಿ ಗೋವರ್ಧನ ಎಂಬವರು ದೂರು ನೀಡಿದ್ದಾರೆ.
ಸೌಮ್ಯ ಹಾಗೂ ಬಾಲಸುಬ್ರಹ್ಮಣ್ಯ ಎಂಬವರು ಮಂಡೆಕೊಚ್ಚಿಯಲ್ಲಿರುವ ಸರ್ವೆ ನಂಬರ್ ಮಾಣಿಯಡ್ಕ ಮಂಡೆಕೊಚ್ಚಿ ರಸ್ತೆಯ 347-3ಎ3ಸಿ ಯಲ್ಲಿ 0.14 ಎಕ್ರೆ ಸ್ಥಳವನ್ನು ಅತಿಕ್ರಮಿಸಿದ್ದು, ರಸ್ತೆ ಅತಿಕ್ರಮಣದಿಂದಾಗಿ ಈ ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೆ ತೊಂದರೆಯಾಗಿರುತ್ತದೆ. ಇವರು ಈ ಹಿಂದೆ ಕೂಡಾ ರಸ್ತೆ ಅತಿಕ್ರಮಣ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೆ ಜೆಸಿಬಿ ಯಂತ್ರದ ಮೂಲಕ ರಸ್ತೆ ಅತಿಕ್ರಮಣ ಮಾಡಿ ಮಣ್ಣು ರಾಶಿ ಹಾಕಿದ್ದು ಅದನ್ನು ತೆರವು ಮಾಡಿ ಅತಿಕ್ರಮಣಕ್ಕೆ ತಡೆ ನೀಡುವಂತೆ ದೂರಿನಲ್ಲಿ ತಿಳಿಸಿದ್ದಾರೆ.