ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಪೂರ್ವಭಾವಿ ಸಭೆ, ಸಮಿತಿ ರಚನೆ

0

ಅಧ್ಯಕ್ಷರಾಗಿ ಜಯಕುಮಾರ್ ಆರ್ ನಾಯರ್, ಪ್ರ. ಕಾರ್ಯದರ್ಶಿಯಾಗಿ ವಿನ್ಯಾಸ್ ಯು.ಎಸ್

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.26ರಂದು ನಡೆಯಲಿರುವ ಮೂರನೇ ವರ್ಷದ ಜಾತ್ರೋತ್ಸವದ ಪೂರ್ವಭಾವಿ ಸಭೆಯು ಡಿ.1ರಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಹಾಗೂ ಆಡಳಿತಾಧಿಕಾರಿ ಅಶ್ವಿನಿಯವರ ನೇತೃತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಉತ್ಸವ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಈ ವರ್ಷದ ಜಾತ್ರೋತ್ಸವವನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಜಾತ್ರೋತ್ಸವ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು. ಆಮಂತ್ರಣ ಪತ್ರಿಕೆ ಮುದ್ರಣ, ಹೊರೆಕಾಣಿಕೆ ಸಮರ್ಪಣೆ, ಉಪ ಸಮಿತಿಗಳ ಜವಾಬ್ದಾರಿಗಳ ಬಗ್ಗೆ ಚರ್ಚಿಸಲಾಯಿತು.


ಜಾತ್ರೋತ್ಸವ ಸಮಿತಿ:
ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಕುಮಾರ್ ಆರ್ ನಾಯರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಿನ್ಯಾಸ್ ಯು.ಎಸ್ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಜತೆ ಕಾರ್ಯದರ್ಶಿಯಾಗಿ ಕುಂಞಣ್ಣ ಗೌಡ, ರವಿ ಗೌಡ ಬೈಲಾಡಿ, ಉಪಾಧ್ಯಕ್ಷರಾಗಿ ರವೀಂದ್ರ ಎಸ್, ರವೀಂದ್ರ ರಾವ್, ಭೀಮಯ್ಯ ಭಟ್, ಸುರೇಶ್ ಪೂಜಾರಿ, ಉಮೇಶ್ ಎಸ್.ಕೆ., ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಡಾ.ಸುರೇಶ್ ಪುತ್ತೂರಾಯ, ಅರುಣ್ ಕುಮಾರ್ ಪುತ್ತಿಲ, ವಿಜಯ ಬಿ.ಎಸ್., ಶಿವರಾಮ ಆಳ್ವ ಬಳ್ಳಮಜಲು, ಶ್ರೀಕೃಷ್ಣ ಭಟ್, ಕೋಶಾಧಿಕಾರಿಯಾಗಿ ಉದಯ ಕುಮಾರ್ ರೈ ಎಸ್ ಸಂಪ್ಯ, ಗೌರವ ಸಲಹೆಗಾರರಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಕೃಷ್ಣಪ್ಪ, ಜಯಂತ ನಡುಬೈಲು, ಈಶ್ವರ ಭಟ್ ಪಂಜಿಗುಡ್ಡೆ, ರಮೇಶ್ ಪ್ರಭು ವಿನ್ನರ್, ಪ್ರಸನ್ನ ಕುಮಾರ್ ಮಾರ್ತ, ಮುರಳೀಕೃಷ್ಣ ಹಸಂತಡ್ಕ, ಭಾಸ್ಕರ ಆಚಾರ್ ಹಿಂದಾರ್, ದಿವಾಕರ ದಾಸ್ ನೇರ್ಲಾಜೆ, ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಗಂಗಾಧರ ಅಮೀನ್, ಸಿ.ಡಿ ಸುರೇಶ್, ಸೀತಾರಾಮ ಶೆಟ್ಟಿ ಕೆದಂಬಾಡಿ, ಬೂಡಿಯಾರು ರಾಧಾಕೃಷ್ಣ ರೈ, ಜಯಂತ ಶೆಟ್ಟಿ ಕಂಬಳತ್ತಡ್ಡ, ರಮೇಶ್ ರೈ ನೆಲ್ಲಿಕಟ್ಟೆ, ಅಣ್ಣಿ ಪೂಜಾರಿ ಸಂಪ್ಯ, ಡಾ,ರಮೇಶ್ ಭಟ್, ಡಾ. ವೇಣುಗೋಪಾಲ್, ನರೇಂದ್ರ ನಾಯಕ್ ಮರಕ್ಕ, ಸೋಮಶೇಖರ ರೈ ಇಳಂತಾಜೆ, ವಸಂತ ರೈ ಕೃತಿಕಾ ಹಾಗೂ ಉದಯಶಂಕರ ರೈ ಪುಣಚ ಹಾಗೂ ಇತರ ಉಪ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು.


ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಾ.ಸುರೇಶ್ ಪುತ್ತೂರಾಯ, ಅರುಣ್ ಕುಮಾರ್ ಪುತ್ತಿಲ, ಶ್ರೀಕೃಷ್ಣ ಭಟ್, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು, ವಿಜಯ ಬಿ.ಎಸ್., ಅಧ್ಯಕ್ಷ ಜಯಕುಮಾರ್ ಆರ್ ನಾಯರ್, ಪ್ರಧಾನ ಕಾರ್ಯದರ್ಶಿ ವಿನ್ಯಾಸ್ ಯು.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಉದಯ ಕುಮಾರ್ ರೈ ಎಸ್ ಸಂಪ್ಯ ಸ್ವಾಗತಿಸಿ, ವಂದಿಸಿದರು. ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು, ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here