ಪೆರಾಜೆಗುತ್ತು ಚಾವಡಿಯ ಭಂಡಾರದ ಮನೆ ಪುನರ್ ನಿರ್ಮಾಣ- ಜುಮಾದಿ ದೈವದ ಸ್ಥಾನ ನಿರ್ಮಾಣ ಕುರಿತಂತೆ ಪೂರ್ವಭಾವಿ ಸಭೆ

0

ಬಂಟ್ವಾಳ: ಪೆರಾಜೆ ಗ್ರಾಮದ ಅರಸುದೈವ ಗುಡ್ಡೆಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆ ಕೊರತಿ ದೈವಗಳ ಪೆರಾಜೆಗುತ್ತು ಚಾವಡಿಯು ಜೀರ್ಣಾವಸ್ಥೆಗೆ ತಲುಪಿದ್ದು ನೂತನ ಗುತ್ತು ಚಾವಡಿಯ ಭಂಡಾರದ ಮನೆಯ ಪುನರ್ ನಿರ್ಮಾಣ ಮತ್ತು ಜುಮಾದಿ ದೈವದ ಸ್ಥಾನ ನಿರ್ಮಾಣ ಕುರಿತಂತೆ ಪೂರ್ವಭಾವಿ ಸಭೆಯು ಡಿ.8ರಂದು ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಿತು.

ಕೆ ಶ್ರೀಕಾಂತ ಆಳ್ವ ಪೆರಾಜೆ ಗುತ್ತು ಇವರು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೂತನ ಭಂಡಾರದ ಮನೆಯ ನಿರ್ಮಾಣದ ಕುರಿತಂತೆ ಸಭೆಯಲ್ಲಿ ಊರವರಿಂದ ವಿಚಾರ ವಿಮರ್ಶೆಗಳು ನಡೆದು ಶೀಘ್ರದಲ್ಲಿ ನೂತನವಾಗಿ ಗುತ್ತು ಚಾವಡಿಯ ಭಂಡಾರದ ಮನೆಯನ್ನು ಪೆರಾಜೆಗುತ್ತು ಪದ್ಮಾವತಿ ಆಳ್ವರವರ ನೇತೃತ್ವದಲ್ಲಿ ಪುನರ್ ನಿರ್ಮಿಸಲು ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ನೂತನ ಜೀರ್ಣೋದ್ಧಾರ ಸಮಿತಿ ರಚಿಸಲಾಯಿತು. ಗೌರವಾದ್ಯಕ್ಷರಾಗಿ ಸಚ್ಚಿದಾನಂದ ರೈ ಮತ್ತು ಅಪ್ರಾಯ ಪೈ, ಅಧ್ಯಕ್ಷರಾಗಿ ಕುಶಾಲ ಎಂ.ಪೆರಾಜೆ, ಉಪಾಧ್ಯಕ್ಷರಾಗಿ ಹರೀಶ್ ರೈ ಮತ್ತು ರವೀಂದ್ರ ರೈ, ಕಾರ್ಯದರ್ಶಿಗಳಾಗಿ ನಿವೃತ್ತ ಶಿಕ್ಷಕ ಸಂಜೀವ ಸಾದಿಕುಕ್ಕು ಮತ್ತು ಸಂಜೀವ ನಾಯ್ಕ ನಡುಪಾಲು ಮತ್ತು ಇನ್ನಿತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಗ್ರಾಮದ ಬೈಲುವಾರು ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ನೀಡಲಾಯಿತು. ಅಂತೆಯೇ 2025ನೇ ಜನವರಿ 3 ರಂದು ಕರಸೇವೆ ಮೂಲಕ ನೂತನ ಭಂಡಾರ ಮನೆಯ ನಿರ್ಮಾಣ ಮತ್ತು ಬಾಲಾಲಯ ರಚನಾ ಕಾರ್ಯಗಳಿಗೆ ಪೆರಾಜೆ ಗುತ್ತಿನಲ್ಲಿ ಪ್ರಾರ್ಥಿಸಿ ಚಾಲನೆ ನೀಡುವುದೆಂದು ತೀರ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಪೆರಾಜೆ ಗುತ್ತು ಡಾ. ಶ್ರೀನಾಥ್ ಆಳ್ವ, ಜಯರಾಮ ರೈ, ಬಿ.ಟಿ.ನಾರಾಯಣ ಭಟ್, ಶಾಂತಪ್ಪ ಮೂಲ್ಯ ,ಲಕ್ಷ್ಮೀಶ ಪಿ., ರಾಮಣ್ಣ ಗೌಡ, ಜನಾರ್ಧನ ಪಾಳ್ಯ, ಸುಂದರ ಬಂಗೇರ, ಸುಂದರ ಗೌಡ, ಕೃಷ್ಣ ಗೌಡ, ಮೋನಪ್ಪ‌ ಸಾಲಿಯಾನ್, ವಾಸು ನಾಯ್ಕ ಹಾಗೂ ದೈವ ಚಾಕಿರಿಯವರು ಮತ್ತು ದೈವಸ್ಥಾನಕ್ಕೆ ಸಂಬಂಧಪಟ್ಟ ಮನೆತನದವರು, ಊರ ಪ್ರಮುಖರು, ಪೆರಾಜೆ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here