ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಇದರ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ ಕಾರ್ಯಕ್ರಮಕ್ಕೆ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿದ್ಯುಕ್ತವಾಗಿ ಚಾಲನೆ ನೀಡಿದ್ದು ನಂತರ ಪ್ರತಿ ಒಕ್ಕೂಟದಲ್ಲಿ ಸ್ಥಳೀಯವಾಗಿ ಗಣ್ಯರ ಉಪಸ್ಥಿತಿಯಲ್ಲಿ ವಿತರಣಾ ಕಾರ್ಯಕ್ರಮ ನಡೆಯುತ್ತಿದೆ.
ಬೆಟ್ಟಂಪಾಡಿ ವಲಯದ ಗುಮ್ಮಟೆಗದ್ದೆ ಒಕ್ಕೂಟದಲ್ಲಿ ಅಧ್ಯಕ್ಷ ಹರೀಶ್ ಗೌಡ, ಒಕ್ಕೂಟದ ಕೋಶಾಧಿಕಾರಿ ಪುರಂದರ ಗೌಡ, ವಲಯ ಮೇಲ್ವಿಚಾರಕ ಸೋಹನ್ ಗೌಡ ಉಪಸ್ಥಿತಿಯಲ್ಲಿ ಡಿ.10ರಂದು ವಿತರಣಾ ಕಾರ್ಯಕ್ರಮ ನಡೆಯಿತು. ಸೇವಾ ಪ್ರತಿನಿಧಿ ಭಾರತಿ, ಷಣ್ಮುಖ ಮತ್ತು ರಕ್ಷಣ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮತ್ತೊಂದು ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ವಲಯದ ಅಜಲಡ್ಕ ಒಕ್ಕೂಟದ ಸದಸ್ಯರಿಗೆ ಲಾಭಂಶ ವಿತರಣಾ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷ ಚನಿಯಪ್ಪ ನಾಯ್ಕ, ಮೇಲ್ವಿಚಾರಕ ಸೋಹನ್ ಗೌಡ, ನೇತ್ರಾವತಿ ಸಂಘದ ಸದಸ್ಯರು ಹಾಗೂ ಸೇವಾ ಪ್ರತಿನಿಧಿ ಭಾರತಿ ಉಪಸ್ಥಿತರಿದ್ದರು.