ಪುತ್ತೂರು: ಮುರ ಜಂಕ್ಷನ್ ನಲ್ಲಿ ಸಸ್ಯಹಾರಿ, ಮಾಂಸಾಹಾರಿ ಫ್ಯಾಮಿಲಿ ರೆಸ್ಟೋರೆಂಟ್ ಹೊಟೇಲ್ ರಂಗ್ ಡಿ.12ರಂದು ಶುಭಾರಂಭಗೊಂಡಿತು. ಧರ್ಮದರ್ಶಿ ರವಿ ಕಾವುರವರ ಪ್ರಾರ್ಥನೆಯೊಂದಿಗೆ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ, ಉದ್ಘಾಟಿಸಿ ಮಹಾಲಿಂಗೇಶ್ವರ ದೇವರ ಆಶೀರ್ವಾದ, ದೈವ,ದೇವರುಗಳ ಅನುಗ್ರಹದಿಂದ ಸಂಸ್ಥೆ ಬೆಳಗಲಿ ಎಂದು ಶುಭ ಹಾರೈಸಿದರು. ಕಟ್ಟಡ ಮಾಲಕ ದಿವಾಕರ ಮುರ, ಅಶ್ವಥ್ ಕುಲಾಲ್ ಮಿತ್ತೂರು, ಶಿವಯ್ಯ ಬೆಳ್ತಂಗಡಿ, ಹರೀಶ್ ಸೇಡಿಯಾಪು, ನಳಿನಿ ಹರೀಶ್ ಸೇರಿದಂತೆ ಹಲವಾರು ಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ಮಾಲಕರ ತಂದೆ ಐತ್ತಪ್ಪ ಮೂಲ್ಯ, ತಾಯಿ ಉಮಾವತಿ, ಪತ್ನಿ ಕಾವ್ಯಶ್ರೀ, ಪುತ್ರ ಅಧ್ವಿತ್, ಸಹೋದರ ಸಂತೋಷ್, ಸಹೋದರನ ಪತ್ನಿ ರಕ್ಷಿತಾ, ಪುತ್ರಿ ತಸ್ವಿ, ಸಹೋದರಿ ಸುರೇಖಾ, ಭಾವ ಸತೀಶ್ ಹೊಸಮೊಗ್ರು ಪುತ್ರ ಈಶಾಲ್’ಕೃಷ್ಣ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಲಕ್ಷ್ಮೀಶ ಮಚ್ಚಿಮಲೆ ಅತಿಥಿಗಳನ್ನು ಸ್ವಾಗತಿಸಿ, ನಮ್ಮಲ್ಲಿ ಸಸ್ಯಹಾರಿ, ಮಾಂಸಾಹಾರಿ ಊಟ, ಚಾ, ತಿಂಡಿ, ಚೈನೀಸ್ ಪುಡ್ ಲಭ್ಯವಿದ್ದು, ಮದುವೆ ಸಮಾರಂಭ ಹಾಗೂ ಇನ್ನಿತರ ಶುಭ ಕಾರ್ಯಕ್ರಮಗಳಿಗೆ ಶುಚಿ-ರುಚಿಯಾದ ಅಡುಗೆ ತಯಾರಿಸಿ ಕೊಡಲಾಗುವುದು ಎಂದರು.