ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್(ರಿ.), ಪುತ್ತೂರು ಇದರ ಸಾರಥ್ಯದಲ್ಲಿ 2ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧರ್ಮ ಸಂಗಮ ಕಾರ್ಯಕ್ರಮದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸವಣೂರು ಯುವ ಸಭಾಭವನದಲ್ಲಿ ದ.11ರಂದು ನಡೆಯಿತು.
ಈ ಸಂದರ್ಭದಲ್ಲಿ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಧರ್ಮ ಸಂಗಮ ಕಾರ್ಯಕ್ರಮ ಹಾಗೂ ಶ್ರೀನಿವಾಸ ದೇವರ ಕಾರ್ಯಕ್ರಮದಲ್ಲಿ ಹಿಂದುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸಬೇಕೆಂದು, ಇದಕ್ಕಾಗಿ ಪ್ರತೀ ಮನೆ ಮನೆಗೂ ಕಾರ್ಯಕ್ರಮಕ್ಕೆ ಆಮಂತ್ರಿಸುವ ಕಾರ್ಯ ನಮ್ಮಿಂದ ಆಗಬೇಕೆಂದು, ಹಾಗೂ ಪ್ರತಿಯೊಬ್ಬರ ಸಹಕಾರ ಬಯಸಿದರು.
ಕಾರ್ಯಧ್ಯಕ್ಷ ಉಮೇಶ್ ಕೋಡಿಬೈಲು ಕಾರ್ಯಕ್ರಮದ ಮಾಹಿತಿ ನೀಡಿದರು.
ವೆಂಕಟ್ರಮಣ ಕಡಬ, ವೆಂಕಟೇಶ್ ಭಟ್ ಕೊಯಿಕುಡೆ, ಗಿರಿಶಂಕರ್ ಸುಲಾಯ, ರಾಕೇಶ್ ರೈ ಕೆಡೆಂಜಿ, ತಾರಾನಾಥ ಕಾಯರ್ಗ, ಗಂಗಾಧರ ಪೆರಿಯಡ್ಕ, ಸುಪ್ರೀತ್ ರೈ ಖಂಡಿಗ, ಶ್ರೀಧರ ಇಡ್ಯಾಡಿ, ರಾಮಕೃಷ್ಣ ಪ್ರಭು, ಚೇತನ್ ಕುಮಾರ್ ಕೊಡಿಬೈಲ್, ಸತೀಶ್ ಬಲ್ಯಾಯ, ದಿವಾಕರ ಬಸ್ತಿ, ಸಚಿನ್ ಸವಣೂರು, ಕೀರ್ತನ್ ಕೋಡಿಬೈಲು, ಹಾಗೂ ಹಿಂದು ಕಾರ್ಯಕರ್ತರು ಉಪಸ್ಥಿತರಿದ್ದರು.