ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದಲ್ಲಿ ಡಿಸೆಂಬರ್ 10 ಮತ್ತು 11 ರಂದು ನಡೆದ ಮೈಸೂರು ವಿಭಾಗೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ 14 ಮತ್ತು17 ವಯೋಮಾನದ ಬಾಲಕರ ತಂಡಗಳು ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ .
17 ರ ವಯೋಮಾನದ ಬಾಲಕರ ವಿಭಾಗದಲ್ಲಿ 10ನೇ ತರಗತಿಯ ಆಕಾಶ್ ರೈ, ಅಕ್ಷಜ್ ಶೆಟ್ಟಿ, ತನ್ವಿತ್, ಅಹಮ್ಮದ್ ಶಬೀರ್, ಪುನೀತ್, 9ನೇ ತರಗತಿಯ ಚಿಂತನ್ ಕೆ. ಸಿ, ಆಯುಶ್ ಎಸ್ ಶೆಟ್ಟಿ, ಇಮಾಮ್ ಅಹಮದ್, ಕವೀಶ್ ಬಿ.ಕೆ, 8ನೇ ತರಗತಿಯ ಸಮೃದ್ಧ ಜೈನ್ ಭಾಗವಹಿಸಿರುತ್ತಾರೆ.
14 ರ ವಯೋಮಾನದ ಬಾಲಕರ ವಿಭಾಗದಲ್ಲಿ 8ನೇ ತರಗತಿಯ ಆಯತ್ತುಲ್ಲಾ ಸಲೀಮ್, 7ನೇ ತರಗತಿಯ ಶಿಶಿರ್ ಜೆ. ಸಾಲ್ಯಾನ್, ಮುಹಮ್ಮದ್ ಇರಾಝ್, ಸುಜಿತ್, ಸ್ವರ್ಣೇಶ್, ಆಯುಶ್ ಡಿ. ಪೂಜಾರಿ, ವಚನ್ ಕನ್ಯಾನ, ಮೊಹಮ್ಮದ್ ಅಫಾಮ್ ಭಾಗವಹಿಸಿರುತ್ತಾರೆ.
ಅಕ್ಷಜ್ ಶೆಟ್ಟಿ ಮತ್ತು ಆಯತ್ತುಲ್ಲಾ ಸಲೀಂ ಉತ್ತಮ ಎಸೆತಗಾರರಾಗಿ, ಚಿಂತನ್ ಕೆ.ಸಿ ಮತ್ತು ಶಿಶಿರ್ ಜೆ ಸಾಲಿಯಾನ್ ಸವ್ಯಸಾಚಿ ಆಟಗಾರರಾಗಿ ಮೂಡಿಬಂದಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾ , ಶ್ರೀರಂಜಿನಿ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ತಿಳಿಸಿದ್ದಾರೆ.