ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಟ್ಟಿನೋಪಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2024-2027ನೇ ಅವಧಿಗೆ ನೂತನ ಶಾಲಾಭಿವೃದ್ಧಿ ಸಮಿತಿಯನ್ನು ದ.12ರಂದು ರಚಿಸಲಾಯಿತು. ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ, ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿರುವ ಅಶ್ರಫ್ ಉಜಿರೋಡಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ರಚನೆಯಲ್ಲಿ ಇಲಾಖಾ ಸುತ್ತೋಲೆಯಂತೆ ನಿಯಮ ಪ್ರಕಾರ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷರಾಗಿ ಅಬೂಬಕ್ಕರ್, ಉಪಾಧ್ಯಕ್ಷರಾಗಿ ಸುಂದರಿಯವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಮಹಾಬಲ, ಭವಾನಿ, ಝೀನತ್, ಬಿ.ಸುಮಯ್ಯ, ಫಾತಿಮಾ, ಸೌಧ, ಉಮ್ಮುಕುಲ್ಸು, ಅಸ್ಮಾ,ಜಮಾಲುದ್ದೀಣ್, ಅಬ್ದುಲ್ಲಾ, ಸುಮಯ್ಯ, ಕೈರುನ್ನೀಸ, ಮರಿಯಮ್ಮ, ಅಪ್ಸಾ, ತಾಹಿರಾ, ಸುಕನ್ಯಾರವರುಗಳನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಸದಸ್ಯರುಗಳಾದ ಚಿತ್ರಾ ಬಿ.ಸಿ, ಸುಂದರಿ, ಶೀನಪ್ಪ ನಾಯ್ಕರವರು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಫಿಲೋಮಿನಾರವರು ಸ್ವಾಗತಿಸಿ, ವಂದಿಸಿದರು.