ಕಾಣಿಯೂರು: ಇತ್ತೀಚಿಗೆ ನಿಧನರಾದ ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಕೆಂಚಪ್ಪ ಗೌಡ ವಾಲ್ತಾಜೆ ಅವರ ಕುಟುಂಬಕ್ಕೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಡೈರಿ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಸಂಘದ ಮೂಲಕ ಮರಣ ಸ್ವಾಂತ್ವಾನ ನಿಧಿಯಿಂದ ರೂಪಾಯಿ ಐವತ್ತು ಸಾವಿರದ ಚೆಕ್ ನ್ನು ಹಸ್ತಾಂತರಿಸಲಾಯಿತು.
ಕೆಂಚಪ್ಪ ಗೌಡರ ಪತ್ನಿ ನೀಲಮ್ಮ ಅವರು ಚೆಕ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಕಲ್ಲೂರಾಯ,ಮಂಗಳೂರು ಕೆ ಎಂ ಎಫ್ ನ ಉಪ ವ್ಯವಸ್ಥಾಪಕಿ
ಶೃತಿ, ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಧನಂಜಯ ಕೆನಜೆ ಉಪಾಧ್ಯಕ್ಷ ಕುಸುಮಾದರ ಇಡ್ಯಡ್ಕ, ನಿರ್ದೇಶಕರಾದ ವಸಂತ ದಲಾರಿ, ಗೋಪಾಲಕೃಷ್ಣ ಬಾರೆಂಗಳ, ಗಣೇಶ ಮುಂಗ್ಲಿಮಜಲು, ವಾಸಪ್ಪ ಗೌಡ ನಾಣಿಲ, ರಾಮಚಂದ್ರ ಕೋಲ್ಪೆ, ರಾಮಣ್ಣ ಗೌಡ ಪೊನ್ನೆತ್ತಡಿ ಕಾಂತ ಪರವ,ರಾಜೀವಿ ಬೊಮ್ಮಳಿಗೆ ಕುಸುಮಾವತಿ ಕಳ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು ಸಂಘದ ಕಾರ್ಯದರ್ಶಿ ದಮಯಂತಿ ಮುದುವ ಸ್ವಾಗತಿಸಿ, ವಂದಿಸಿದರು.