ರೈತ ಕ್ಷೇತ್ರ ಪಾಠ ಶಾಲೆ ಮಾಹಿತಿ,ಲಾಭಾಂಶ ವಿತರಣಾ ಕಾರ್ಯಕ್ರಮ

0

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಕಡಬ ತಾಲೂಕು ಆಲಂಕಾರು ವಲಯ ಪೆರಾಬೆ ಕಾರ್ಯಕ್ಷೇತ್ರದ ವತಿಯಿಂದ ಮೇಘನಾಥ ಬಲತ್ತಾನೆ ಅವರ ಮನೆಯಲ್ಲಿ ರೈತ ಕ್ಷೇತ್ರ ಪಾಠ ಶಾಲೆ ಮಾಹಿತಿ ಕಾರ್ಯಕ್ರಮ, ಲಾಭಾಂಶ ವಿತರಣಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಾಬೆ ಒಕ್ಕೂಟದ ಉಪಾಧ್ಯಕ್ಷರಾದ ವಿಶ್ವನಾಥ ಮಡಿವಾಳ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಆಲಂಕಾರು ಮಣ್ಣು ಪರೀಕ್ಷಾ ಕೇಂದ್ರದ ಮಣ್ಣು ಪರೀಕ್ಷಕ ರವಿಕಿರಣ್ ಮಣ್ಣಿನಲ್ಲಿನ ಲವಣಾಂಶಗಳು ಪೊಟ್ಯಾಶಿಯಂ, ಯೂರಿಯಾ, ಪಾಸ್ಪೋರೇಟ್, ಬಳಕೆ ಬಗ್ಗೆ ಮತ್ತು ಕೃಷಿಗೆ ಬರುವ ರೋಗಗಳ ಬಗ್ಗೆ ಮಾಹಿತಿ ನೀಡಿದರು.


ಕಡಬ ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್ ಪ್ರಾಸ್ತಾವಿಕ ಮಾತನಾಡಿದರು. ವಲಯ ಮೇಲ್ವಿಚಾರಕಿ ಸುಜಾತಾ ತಂಡದ ಸದಸ್ಯರಿಗೆ ಲಾಭಾಂಶ ವಿತರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿ ಹರೀಶ್ , ಸದಸ್ಯರು ಭಾಗವಹಿಸಿದರು.ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕಿ ಸುಜಾತಾ ಸ್ವಾಗತಿಸಿ,ನಿರೂಪಿಸಿದರು. ಧನ್ಯಶ್ರೀ ಸಂಘದ ಸದಸ್ಯೆ ಗೌರಿ ವಂದಿಸಿದರು.

LEAVE A REPLY

Please enter your comment!
Please enter your name here