ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಎಚ್.ಆರ್.ಡಿ. ಕಾರ್ಯಕ್ರಮ

0

ದಕ್ಷಿಣ ಕನ್ನಡದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಮುಂಚೂಣಿಯಲ್ಲಿದೆ : ಸುರೇಶ ಶೆಟ್ಟಿ

ಪುತ್ತೂರು: ದಕ್ಷಿಣ ಕನ್ನಡದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಹಿಂದಿನಿಂದಲೂ ಮುಂಚೂಣಿಯಲ್ಲಿತ್ತು. ದಕ್ಷಿಣ ಕನ್ನಡವನ್ನು ಸಹಕಾರಿ ಕ್ಷೇತ್ರದ ತೊಟ್ಟಿಲು ಎಂದು ಕರೆದಿದ್ದಾರೆ. ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್, ಆಗಿನ ಸಿಂಡಿಕೇಟ್ ಬ್ಯಾಂಕುಗಳು ಪ್ರಾರಂಭಿಕ ಹಂತದಲ್ಲೇ ತುಂಬಾ ಹೆಸರು ಪಡೆದಿವೆ ಎಂದು ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಆಯೋಜಿಸಲಾದ ಎಸ್.ಆರ್.ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.


ಕರ್ನಾಟಕ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಶ್ರೀಹರಿ ಮಾತನಾಡಿ ಬ್ಯಾಂಕ್‌ನಲ್ಲಿ ಇರುವ ಸೌಲಭ್ಯಗಳ ಬಗೆಗೆ ಮಾಹಿತಿ ನೀಡಿದರು. ಮಾರ್ಕೆಟಿಂಗ್ ಆಫೀಸರ್ ಕರಿಯಮ್ಮ ಮತ್ತು ಮ್ಯಾನೇಜರ್ ಶ್ರೀಶ ಶಿಕ್ಷಣ ಸಾಲದ ಬಗ್ಗೆ ಮತ್ತು ಬ್ಯಾಂಕುಗಳ ಕಾರ್ಯ ಕ್ಷೇತ್ರದ ಬಗ್ಗೆ ವಿವರಿಸಿದರು. ವಿದ್ಯಾರ್ಥಿನಿ ಮಹತಿ ಮತ್ತು ತಂಡ ಪ್ರಾರ್ಥಿಸಿದರು. ಕಾಲೇಜಿನ ಉಪಪ್ರಾಂಶುಪಾಲೆ ಶೈನಿ ಕೆ.ಜೆ. ಸ್ವಾಗತಿಸಿದರು. ಉಪನ್ಯಾಸಕಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here