ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇವರ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಸಂಯೋಗದಲ್ಲಿ ಯುವ ಬಂಟರ ಸಂಘ ಪುತ್ತೂರು ತಾಲೂಕು ನೇತೃತ್ವದಲ್ಲಿ ಮಹಿಳಾ ಬಂಟರ ಸಂಘ ಮತ್ತು ವಿದ್ಯಾರ್ಥಿ ಬಂಟರ ಸಂಘ ಪುತ್ತೂರು ತಾಲೂಕು ಇವರ ಸಹಯೋಗದೊಂದಿಗೆ ಡಿ.15ರಂದು ಬೆಳಿಗ್ಗೆ 8.30ರಿಂದ ಅಪರಾಹ್ನ 1.30ರ ತನಕ ಪುತ್ತೂರು ಬಂಟರ ಭವನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಕಥಾವಾಚನ-ಪ್ರವಚನ ನಡೆಯಲಿದೆ ಎಂದು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು (ಡಿ.15) ಬಂಟರ ಭವನದಲ್ಲಿ ತಾಲೂಕು ಯುವ ಬಂಟರ ಸಂಘದಿಂದ ಸತ್ಯನಾರಾಯಣ ಪೂಜೆ, ಕಥಾವಾಚನ – ಪ್ರವಚನ