ಪುತ್ತೂರು: ಬುಡಕನ್ ಕರಾಟೆ ಇಂಟರ್ ನ್ಯಾಷನಲ್ ಇದರ ವತಿಯಿಂದ ತೆಂಕಿಲ ವಿವೇಕಾನಂದ ಆ.ಮಾ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ಲೋಕ್ ರೈ.ಬಿ ಕಟಾದಲ್ಲಿ ಬೆಳ್ಳಿ ಮತ್ತು ಕುಮಿಟೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಪುತ್ತೂರು ಇಂಪ್ಯಾಕ್ಟ್ ಆರ್ಟ್ ಆಂಡ್ ಸ್ಪೋರ್ಟ್ ಕರಾಟೆ ಕ್ಲಬ್ ನ ವಿದ್ಯಾರ್ಥಿಯಾದ ಇವರು ಕರಾಟೆ ಶಿಕ್ಷಕ ಟಿ.ಡಿ ಥೋಮಸ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆ ಏಮಾಜೆಯ ವಿದ್ಯಾರ್ಥಿಯಾಗಿರುವ ಇವರು ಉಮೇಶ್ ರೈ ಬಿ ಮತ್ತು ಮೋದಾಕ್ಷಿ ದಂಪತಿ ಪುತ್ರ.