ಪುತ್ತೂರು: ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್, ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಮತ್ತು ಕೆವಿಜಿ ದಂತ ಮಹಾವಿದ್ಯಾಲಯ ಸುಳ್ಯ ಇದರ ಸಹಯೋಗದಲ್ಲಿ 27ನೇ ಉಚಿತ ದಂತ ಚಿಕಿತ್ಸಾ ಶಿಬಿರ ಡಿ.15ರಂದು ಶ್ರೀ ಸತ್ಯಸಾಯಿ ಮಂದಿರ ವಠಾರದಲ್ಲಿ ನಡೆಯಿತು.
ಶಿಬಿರವನ್ನು ಸುಳ್ಯ ಕೆವಿಜಿ ದಂತ ವಿದ್ಯಾಲಯದ ಮೇಲ್ವಿಚಾರಕ ಡಾ.ಶಿವಾನಂದ ದೀಪ ಬೆಳಗಿಸಿ ಉದ್ಘಾಟಿಸಿರು. ಬಳಿಕ ಮಾತನಾಡಿದ ಅವರು ಹಲ್ಲಿನ ಸುರಕ್ಷತೆಯ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೆವಿಜಿ ದಂತ ವಿದ್ಯಾಲಯದ ಹಿರಿಯ ವೈದ್ಯೆ ಡಾ.ಅಮೋಘ, ಸತ್ಯಸಾಯಿ ಮಂದಿರದ ಹಿರಿಯರಾದ ಪದ್ಮನಾಭ ನಾಯಕ್ ಉಪಸ್ಥಿತರಿದ್ದರು.
ಪ್ರಮುಖ ಟಿ. ರೈ ಹಾಗೂ ಪ್ರಶಾಂತಿ ಪ್ರಾರ್ಥಿಸಿದರು. ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಡಾ.ಸತ್ಯಸುಂದರ ರಾವ್ ಸ್ವಾಗತಿಸಿದರು. ರಘುನಾಥ ರೈ ಕಾರ್ಯಕ್ರಮ ನಿರೂಪಿಸಿ, ಚಿತ್ರ ರೈ ವಂದಿಸಿದರು.
ಶಿಬಿರದಲ್ಲಿ ಸುಳ್ಯ ಕೆ.ವಿ.ಜಿ ದಂತ ಮಹಾವಿದ್ಯಾಲಯದ ಅನುಭವೀ ದಂತ ವೈದ್ಯರ ತಂಡದಿಂದ ದಂತ ಕುಳಿ ತುಂಬುವಿಕೆ, ಹಲ್ಲಿನ ಸ್ವಚ್ಛತೆ, ಹಲ್ಲು ಕೀಳುವಿಕೆ, ಕೃತಕ ದಂತ ಜೋಡಣೆ ಮೊದಲಾದ ಚಿಕಿತ್ಸೆಗಳು ನೀಡಲಾಯಿತು. 96 ಮಂದಿ ಭಾಗವಹಿಸಿ ಶಿಬರದ ಪ್ರಯೋಜನ ಪಡೆದುಕೊಂಡರು.