ಪುತ್ತೂರು: ಪುತ್ತೂರು ಬೈಪಾಸ್ ರಸ್ತೆ ತೆಂಕಿಲದಲ್ಲಿ ಕಾರುಗಳೆರಡರ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಡಿ.15ರಂದು ನಡೆದಿದೆ.
ಘಟನೆಯಲ್ಲಿ ಕಾರುಗಳೆರಡಕ್ಕೆ ಹಾನಿಯಾಗಿದೆ.ಮೈಸೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಕಾರು ಹುಂಡೈ ಮತ್ತು ಸುಳ್ಯ ಅರಂತೋಡು ಕಡೆ ಹೋಗುತ್ತಿದ್ದ ಟಾಟಾ ನೆಕ್ಸಾನ್ ಕಾರು ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.