ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಗ್ರಾಮದ ಸಾಧಕ ವಿದ್ಯಾರ್ಥಿಗಳಿಗೆ, ದೈವ ನರ್ತಕರಿಗೆ ಸನ್ಮಾನ

0

ಕಡಬ: ಕಡಬ ತಾಲೂಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಡಿ.16ರಂದು ನಡೆದ ಸಂಕ್ರಾಂತಿ ಪೂಜೆ ಸಂದರ್ಭದಲ್ಲಿ ಗ್ರಾಮದ ಸಾಧಕ ವಿದ್ಯಾರ್ಥಿಗಳಿಗೆ, ದೇವಸ್ಥಾನದಲ್ಲಿ ಜಾತ್ರೋತ್ಸವ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ದೈವ ನರ್ತಕರಿಗೆ ಸನ್ಮಾನ ನಡೆಯಿತು.


ದೇವಸ್ಥಾನದ ಶ್ರೀ ದುಗಲಾಯಿ ದೈವ ಮತ್ತು ಪರಿವಾರ ದೈವಗಳ ನರ್ತಕರಾದ ಚೆನ್ನ ನಲಿಕೆ, ಡೀಕಯ್ಯ ಪರವ, ವಿಶ್ವನಾಥ ಪರವ ಮತ್ತು ಕಬಡ್ಡಿಯಲ್ಲಿ ಸಾಧನೆ ಮಾಡಿದ ಸಮರ್ಥ್ ಆನೆಗುಂಡಿ, ತ್ರೋಬಾಲ್‌ನಲ್ಲಿ ಸಾಧನೆಗೈದ ನಿಕೇತನ್ ಆನೆಗುಂಡಿ, ಕರಾಟೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಯದ್ವಿತ್ ಕೆ.ಪಿ ಕೊಲ್ಯ, ವಿಭಾ ಯು.ಎಚ್ ವಳಕಡಮ, ಲಿಖೇತ್ ಕೆ.ಎ ಕಡೆಂಬ್ಯಾಲು, ಅಶ್ವಿತ್ ಪಟಾಲ, ಲಿಖಿನ್ ಟಿ.ಎಸ್ ಸಂಕೇಶ, ಆದ್ವಿ ಪಿ ಪೆರ್ಲ, ಮಕ್ಕಳ ಜಗಲಿ ರಾಜ್ಯ ಮಟ್ಟದ ಕಥಾ ಸಿರಿಯಲ್ಲಿ ಪ್ರಥಮ ಸ್ಥಾನ ಪಡೆದ ಜನನಿ ಪಿ ಪುತ್ಯೆ, ತುಳು ಕಂಠಪಾಠದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಛಾಯಸ್ವರೂಪ್ ಎರ್ಮಡ್ಕ, ಅಭಾಕಸ್‌ನಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಆರ್ವಿ ಹೆಚ್ ಪುತ್ಯೆ ಅವರನ್ನು ಸನ್ಮಾನಿಸಲಾಯಿತು.


ಸ್ವಚ್ಚತೆಯಲ್ಲಿ ಪಥಮ ಸ್ಥಾನ ಪಡೆದ ಕೊಯಿಲ ಗ್ರಾಮ ಪಂಚಾಯಿತಿಗೆ, ಗ್ರಾಮದ ಸಂಜೀವಿನಿ ಒಕ್ಕೂಟಕ್ಕೆ ಗೌರವಾರ್ಪಣೆ ನಡೆಯಿತು.


ಉಪ್ಪಿನಂಗಡಿ ಪಾದಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖರಾದ ಸುರೇಶ್ ಅತ್ರಮಜಲು, ಸುನಿಲ್ ದಡ್ಡು, ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರೂಪಾ, ಮುಖ್ಯಗುರು ನವೀನ್ ರೈ, ಪೆರಾಬೆ ಸರ್ಕಾರಿ ಶಾಲಾ ಶಿಕ್ಷಕ ಜಯಪ್ರಕಾಶ್, ಆಲಂಕಾರು ಶ್ರೀ ಭಾರತಿ ಶಾಲಾ ಶಿಕ್ಷಕ ಚಂದ್ರಹಾಸ ಕುಂಟ್ಯಾನ, ಕಾರ್ಯಕ್ರಮದ ಪ್ರಾಯೋಜಕ ಉದ್ಯಮಿ ಕೆ.ಟಿ ಪೂಜಾರಿ ಕೆರ್ನಡ್ಕ ಅತಿಥಿಗಳಾಗಿ ಭಾಗವಹಿಸಿ ಸಾಧಕರನ್ನು ಸನ್ಮಾನಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಸದಸ್ಯರಾದ ವಿನಯ ರೈ ಕೊಯಿಲಪಟ್ಟೆ, ಸಂಜೀವ ಗೌಡ ಕೊನೆಮಜಲು, ಶ್ರೀರಾಮ, ಮುರಳಿಕೃಷ್ಣ ಬಡಿಲ, ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಚೇತನ್ ಆನೆಗುಂಡಿ ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here